Monday, July 22, 2024
Google search engine
Homeಇ-ಪತ್ರಿಕೆಗಾಂಜಾ ಮಾರಾಟದ ಆರೋಪಿಯ ಬಂಧನ: 88,560 ರೂ. ಮೌಲ್ಯದ ಮಾದಕ ವಸ್ತು ವಶ

ಗಾಂಜಾ ಮಾರಾಟದ ಆರೋಪಿಯ ಬಂಧನ: 88,560 ರೂ. ಮೌಲ್ಯದ ಮಾದಕ ವಸ್ತು ವಶ

ಶಿವಮೊಗ್ಗ: ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಯ ಬಂಧನ ಮಾಡಲಾಗಿದೆ. ಶನಿವಾರ ಮಧ್ಯಾಹ್ನ  ಶಿವಮೊಗ್ಗ ಟೌನ್ ಓತಿಘಟ್ಟದಿಂದ ದುಮ್ಮಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕ ರುದ್ರಭೂಮಿಯ ಹತ್ತಿರ ಆರೋಪಿಯು ಬೈಕ್ ನಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಅಧೀಕ್ಷಕ ಬಾಬು ಆಂಜನಪ್ಪರವರ ಮೇಲ್ವಿಚಾರಣೆಯಲ್ಲಿ,  ಪಿಐ ಮಂಜುನಾಥ್ ಬಿ ಮತ್ತು ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ಐ  ಸಿದ್ದಪ್ಪ ರವರ ನೇತೃತ್ವದ ಸಿಬ್ಬಂದಿಗಳ ತಂಡವು ಸ್ಥಳಕ್ಕೆ  ಹೋಗಿ ದಾಳಿ ನಡೆಸಿದೆ.  ಗಾಂಜಾ ಮಾರಾಟ ಮಾಡುತ್ತಿದ್ದ ಲಕ್ಷ್ಮಿಪುರ ಹೊಸಳ್ಳಿ ತಾಂಡಾದ ಆರೋಪಿ ನಾಗೇಶ ನಾಯ್ಕ(29)  ಈತನನ್ನು ಬಂಧನ ಮಾಡಲಾಗಿದೆ. ಆರೋಪಿಯಿಂದ ಅಂದಾಜು ಮೌಲ್ಯ 88,560  ರೂ.ಗಳ 2 ಕೆಜಿ 214 ಗ್ರಾಂ. ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿತರ ವಿರುದ್ಧ  ತುಂಗಾನಗರ ಕ್ರೈಂ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0322/2024  ಕಲಂ 20(b), 8(c) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

RELATED ARTICLES
- Advertisment -
Google search engine

Most Popular

Recent Comments