Sunday, November 10, 2024
Google search engine
Homeಇ-ಪತ್ರಿಕೆನಿವೃತ್ತಿ ನಂತರ ಮತ್ತೊಂದು ಹೊಸ ಆಧ್ಯಾಯ : ಕವಿತಾ ಯೋಗಪ್ಪನವರ್ ಹೇಳಿಕೆ

ನಿವೃತ್ತಿ ನಂತರ ಮತ್ತೊಂದು ಹೊಸ ಆಧ್ಯಾಯ : ಕವಿತಾ ಯೋಗಪ್ಪನವರ್ ಹೇಳಿಕೆ

ಪಾಲಿಕೆಯ ನಿವೃತ್ತ ನೌಕರರಿಗೆ ಬೀಳ್ಕೊಡುಗೆ

ಶಿವಮೊಗ್ಗ : ಸರ್ಕಾರಿ ನೌಕರರನ್ನು ಹೊಗಳುವುದಕ್ಕಿಂತ ತೆಗಳುವುದೇ ಜಾಸ್ತಿ. ಅಂತಹದರಲ್ಲಿ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಹಿಸುತ್ತಾ ಬಂದಿದ್ದಾರೆ. ನಿಮ್ಮನ್ನು ಬಿಟ್ಟು ಕೊಡುವುದಕ್ಕೆ ಇಷ್ಟ ಇಲ್ಲ ಆದರೂ ಅನಿವಾರ್ಯ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಹೇಳಿದರು.


ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ವಯೋನಿವೃತಿ ಹೊಂದಲಿರುವ ಪೌರಕಾರ್ಮಿಕರಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ನೌಕರರನ್ನು ಬೀಳ್ಕೊಡುತ್ತಿರುವುದು ತುಂಬಾ ದುಃಖದ ಸಂಗತಿಯಾಗಿದೆ. ನಿವೃತ್ತಿ ಹೊಂದುತ್ತಿರುವ 10 ಜನ ಪಾಲಿಕೆ ಸಿಬ್ಬಂದಿಗಳನ್ನು ಬೀಳಕೊಡುವುದಕ್ಕೆ ಇಷ್ಟವಿಲ್ಲ. ಆದರೂ ಅನಿವಾರ್ಯವಾಗಿದೆ. ಮುಂದೆ ನಿಮಗೆ ಒಂದು ಹೊಸ ಅಧ್ಯಾಯ ಆರಂಭ ಆಗುತ್ತದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಯಾವುದೇ ರೀತಿಯ ತೊಂದರೆ ಬಂದರೂ ಸಹ ಪಾಲಿಕೆ ಯಾವಾಗಲೂ ನಿಮ್ಮೊಟ್ಟಿಗಿರುತ್ತದೆ. ಹಲವಾರು ಸಮಸ್ಯೆಗಳ ನಡುವೆಯೂ ನಿಭಾಯಿಸಿಕೊಂಡು ಕೆಲಸ ಮಾಡಿದ್ದೀರಿ. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.


ಉಪ ಆಯುಕ್ತರಾದ ತುಷಾರ್ ಹೊಸೂರ್ ಮಾತನಾಡಿ, ಪ್ರತಿ ಸಲವೂ ನಿವೃತ್ತಿ ಹೊಂದಿದವರಿಗೆ ಬೀಳ್ಕೊಡುಗೆ ಮಾಡಲಾಗುತ್ತದೆ. ಪಿಂಚಣಿ ಸೌಲಭ್ಯ ಸಿಗುತ್ತಿಲ್ಲ ಎಂದು ತಿಂಗಳುಗಟ್ಟಲೇ ಕಚೇರಿಗಳಿಗೆ ಅಲೆಯುತ್ತಿರುತ್ತಾರೆ. 10 ಜನ ನಿವೃತ್ತಿ ಹೊಂದಿದ ಪೌರ ಕಾರ್ಮಿಕರಿಗೆ ನಿವೃತ್ತಿ ದಿನವೇ ಹಣ ಜಮಾ ಆಗಬೇಕು ಎಂಬುದಿತ್ತು. ಅವರು ಕೇಳುವುದಕ್ಕಿಂತ ಮೊದಲೇ ಅವರಿಗೆ ಸಿಗುವ ಸೌಲಭ್ಯವನ್ನು ನೀಡಬೇಕು ಎಂದರು.


ನಿವೃತ್ತಿ ಹೊಂದುತ್ತಿರುವ 10 ಜನ ನೌಕರರಾದ ರತ್ನಾಕರ್.ಎಸ್, ಸೂಲಯ್ಯ, ನಾರಾಯಣ, ಮೂರ್ತಿ, ಬೈಲಪ್ಪ, ನರಸಿಂಹಮೂರ್ತಿ, ನಾಗರಾಜ, ನರಸ, ಪೆಂಚಾಲಮ್ಮ, ಮುನಿ ನರಸಮ್ಮ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ದಿ. ಎನ್.ಜೆ.ರಾಜಶೇಖರ್ (ಸುಭಾಷಣ್ಣ) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕುಮಾರ್, ಮುಖ್ಯ ಲೆಕ್ಕಾಧಿಕಾರಿ ಡಕ್ಣಾನಾಯ್ಕ್, ಮಂಜುನಾಥ್, ಸಂಘದ ಪದಾಧಿಕಾರಿಗಳು, ಪಾಲಿಕೆ ಸಿಬ್ಬಂದಿಗಳು, ನೌಕರರು ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು.

ಎನ್.ಗೋವಿಂದ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ :

ನಿವೃತ್ತಿ ಎನ್ನುವುದು ಪೌರ ಕಾರ್ಮಿಕರಿಗೆ ಮರುಜನ್ಮ ಇದ್ದ ಹಾಗೆ. ನೌಕರಿ ಸಿಗುವುದು ಆಕಸ್ಮಿಕವಾದರೂ ನಿವೃತ್ತಿ ಕಡ್ಡಾಯವಾಗಿರುತ್ತದೆ. ಆದರೆ ಆ ಕಾಲಾವಧಿಯನ್ನು ಮನಗೊಂಡಿರಬೇಕು. ನಿವೃತ್ತಿ ಹೊಂದಿದ ಆತಂಕ ಬೇಡ, ಹಳೆ ತಲೆಮಾರಿಗೆ ಪಿಂಚಣಿ ಕೂಡಾ ಸಿಗುತ್ತದೆ. ನಿವೃತ್ತಿ ನಂತರ ಮನೆಯಲ್ಲಿ ಹೊಂದಿಕೊಳ್ಳಲು ಸ್ವಲ್ಪ ಕಷ್ಟ ಆಗಬಹುದು. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ. ತಮ್ಮೆಲ್ಲರಿಗೂ ಭಗವಂತ ಆಯುರಾರೋಗ್ಯ ನೀಡಲಿ.

RELATED ARTICLES
- Advertisment -
Google search engine

Most Popular

Recent Comments