ಪತ್ರಿಕಾಗೋಷ್ಠಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಸೇವಾ ಸಮಿತಿಯ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಕೆ.ಮಾಧವ ಮೂರ್ತಿ ಮಾಹಿತಿ
ಶಿವಮೊಗ್ಗ: ಶ್ರೀ ಅನ್ನಪೂರ್ಣೇಶ್ವರಿ ಸೇವಾ ಸಮಿತಿ, ಬೊಮ್ಮನಕಟ್ಟೆ ವತಿಯಿಂದ ೧೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜೂ.೯ರ ಭಾನುವಾರದಂದು ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಇವರ ದಿವ್ಯ ಸಾನ್ನಿಧ್ಯ ಹಾಗೂ ಅನುಗ್ರಹ ಆಶೀರ್ವಚನಗಳೊಂದಿಗೆ ಅಯೋಜಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಕೆ.ಮಾಧವ ಮೂರ್ತಿ ತಿಳಿಸಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಸ್ವಾಮೀಜಿಯವರನ್ನು ಸ್ವಾಗತಿಸಿದ ನಂತರ ಅವರ ಅಮೃತ ಹಸ್ತದಿಂದ ಅಮ್ಮನವರಿಗೆ ಕುಂಬಾಭಿಷೇಕ, ಅಮ್ಮನವರ ಸನ್ನಿಧಿಯಲ್ಲಿ ಚಂಡಿಕಾಹೋಮ, ಕಲಾತತ್ವ ಹೋಮ ನೆರವೇರಿಸಲಾಗುವುದು. ಮಧ್ಯಾಹ್ನ ೧೨ಕ್ಕೆ ಮಹಾ ಪೂರ್ಣಾಹುತಿ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ೧೨:೩೦ಕ್ಕೆ ಜಗದ್ಗುರುಗಳ ಆಶೀರ್ವಚನದ ನಂತರ ೧:೩೦ಕ್ಕೆ ಮಹಾಪ್ರಸಾದವಿರುತ್ತದೆ ಎಂದು ಹೇಳಿದರು.
ಅಂದು ಸಂಜೆ ೫ ಗಂಟೆಗೆ ಜಗದ್ಗುರುಗಳ ಅಮೃತ ಹಸ್ತದಿಂದ ಶ್ರೀಚಕ್ರ ನವಾವರಣ ಪೂಜಾ ನಂತರ ಅನುಗ್ರಹದ ಫಲಮಂತ್ರಾಕ್ಷತೆ ವಿತರಣೆಯನ್ನು ಮಾಡಲಾಗುತ್ತದೆ. ಅಮ್ಮನವರ ಕುಂಭಾಷೇಕದ ಸೇವೆಯಲ್ಲಿ ಪಾಲ್ಗೊಳ್ಳಬಹುದು. ಸೇವಾ ಕಾಣಿಕೆಯಾಗಿ ರೂ.೫೦೧ವನ್ನು ನಿಗದಿಪಡಿಸಲಾಗಿದೆ. ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ೧೫ ಅಡಿ ಎತ್ತರದ ಸುಮಾರು ೫೦ ಲಕ್ಷ ವೆಚ್ಚದಲ್ಲಿ ರಾಜಗೋಪುರದ ನಿರ್ಮಾಣದ ಕಾರ್ಯಕೈಗೊಳ್ಳಲಾಗಿದೆ. ಮುಕ್ತಾಯ ಹಂತದಲ್ಲಿರುವ ಈ ರಾಜಗೋಪುರ ನಿರ್ಮಾಣಕ್ಕೆ ಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ತನು, ಮನ, ಧನ ಸಹಾಯ ಮಾಡಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥಿಸುತ್ತೇನೆ. ದೇವಸ್ಥಾನದ ಆಡಳಿತ ಮಂಡಳಿಯಿಂದ ಕೊರೋನಾ ಸಮಯದಲ್ಲಿ ಜನತೆಗೆ ಸಹಾಯ ಹಸ್ತವನ್ನು ಚಾಚಿದ್ದೇವೆ. ವಿದ್ಯಾರ್ಥಿಗಳಿಗೆ ಸಹಾಯವನ್ನು ಮಾಡುತ್ತಾ ಬರುತ್ತಿದ್ದೇವೆ.
ಅಂದು ಈ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ರಾಘವೇಂದ್ರ ಉಡುಪರು ಮತ್ತು ಅರ್ಚಕ ವೃಂದದವರು ಮುಖ್ಯ ಪುರೋಹಿತರುಗಳಾಗಿರುತ್ತಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಹೆಚ್.ಪ್ರಭಾಕರ್, ಉಪಾಧ್ಯಕ್ಷ, ಬಿ.ಕೆ.ಬೆನಕಪ್ಪ, ನಿಕಟಪೂರ್ವ ಅಧ್ಯಕ್ಷ, ಎಂ.ಆರ್.ಬಸವರಾಜ್, ಕಾರ್ಯದರ್ಶಿ, ಬಿ.ಜಿ.ಧನರಾಜ್, ಖಜಾಂಚಿ, ಮಂಜುನಾಥ್.ಸಿ.ಪಾಟೀಲ್, ಕಾರ್ಯಾಧ್ಯಕ್ಷ, ಎಂ.ಆರ್.ಶಿವಕುಮಾರ್, ನಿರ್ದೇಶಕ ಉಪಸ್ಥಿತರಿದ್ದರು.