ಅಣ್ಣಾ ಮಲೈ ಸೋಲು:  ಮೇಕೆ ಕಡಿದು ಸಂಭ್ರಮ, ವಿಡಿಯೋ ವೈರಲ್‌

 ಡಿಎಂಕೆ ಕಾರ್ಯಕರ್ತರ ಕೃತ್ಯ

ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೋತದಕ್ಕೆ ಡಿಎಂಕೆ ಕಾರ್ಯಕರ್ತರು ಮೇಕೆಯನ್ನು ನಡುರಸ್ತೆಯಲ್ಲಿ ಕಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊಯಮತ್ತೂರಿನಿಂದ ಸ್ಪರ್ಧಿಸಿದ್ದ ಅಣ್ಣಾಮಲೈ ೧,೧೮, ೦೬೮ ಮತಗಳ ಅಂತರದಿಂದ ಸೋತಿದ್ದರು. ಡಿಎಂಕೆ ಪಕ್ಷದ ಗಣಪತಿ ರಾಜ್‌ಕುಮಾರ್ ೫,೬೮,೨೦೦ ಮತ ಪಡೆದಿದ್ದರು. ಅಣ್ಣಾ ಮಲೈ ೪,೫೦,೧೩೨ ಮತಗಳನ್ನು ಪಡೆದರು.

ಅಣ್ಣಾಮಲೈ ಫೋಟೋವನ್ನು ಮೇಕೆಯ ಕುತ್ತಿಗೆಗೆ ನೇತು ಹಾಕಿ ನಡು ರಸ್ತೆಯಲ್ಲೆ ಒಂದೇ ಏಟಿನಲ್ಲೆ ಕಡಿದು ಡಿಎಂಕೆ ಕಾರ್ಯಕರ್ತರು ಸಂಭ್ರಮಿಸಿದರು.ಘಟನೆ ಬಗ್ಗೆ ತ.ನಾಡು ಬಿಜೆಪಿ ಘಟಕ ತೀವ್ರವಾಗಿ ಖಂಡಿಸಿದೆ. ಈ ವಿಡಿಯೋವನನು ಅಪ್‌ಲೋಡ್ ಮಾಡಿದ ಸಿಎಂ ಸ್ಟಾಲಿನ್‌ಗೆ ನಾಚಿಕೆಯಾಗಬೇಕೆಂದು ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಹೇಳಿದ್ದಾರೆ.

ನಿಮ್ಮ ಅನಾಗರಿಕ ವರ್ತನೆ ಸ್ವೀಕಾರಾರ್ಹವಲ್ಲ, ನಿಮ್ಮ ಕಾರ್ಯಕರ್ತರಿಗೆ ಸಭ್ಯತೆಯಿಂದ ನಡೆದುಕೊಳ್ಳಲು ಹೇಳಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.ತ.ನಾಡು ಪೊಲೀಸರು ಮೂಕ ಪ್ರೇಕ್ಷಕರಂತೆ ಇರುವುದನ್ನು ಬಿಟ್ಟು ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.