ಶಿವಮೊಗ್ಗ: ಭಾವಸಾರ ಕ್ಷತ್ರಿಯ ಮಹಾಜನ ಸಮಾಜದಿಂದ ಶಿವಮೊಗ್ಗ ನಾಗರೀಕರ ಅನುಕೂಲಕ್ಕಾಗಿ ಮೋಕ್ಷ ವಾಹಿನಿ ವಾಹನವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡಲಾಗಿದೆ. ಎಲ್ಲ ಸಮಾಜದ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಟಿ.ವಿ.ಗಜೇಂದ್ರನಾಥ್ ಹೇಳಿದರು.
ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಮೋಕ್ಷ ವಾಹಿನಿಯು ನಗರದ ರೋಟರಿ ಚಿತಾಗಾರದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು ಹಾಗೂ ರೋಟರಿ ಚಿತಾಗಾರದಲ್ಲಿಯೇ ಮೋಕ್ಷ ವಾಹಿನಿಯನ್ನು ಬುಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಎಲ್ಲ ಸಮಾಜದವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸುತ್ತೇನೆ ಎಂದರು.
ಆಸಕ್ತರು ಬಿ.ಸುರೇಶ್ ಕುಮಾರ್ (ಮೊ. ಸಂ. 9448139485), ವಿನಯ್ ತಾಂದಲೆ (7204563074), ಚಾಲಕರಾದ ಪ್ರಶಾಂತ್ ತಾಂದಲೆ(6361957271) ಇವರನ್ನು ಸಮರ್ಪಕಿಸಬಹುದಾಗಿದೆ. ಮೋಕ್ಷ ವಾಹಿನಿಯು ನಗರದ ವ್ಯಾಪ್ತಿಗೆ ರೂ.600 ಅನ್ನು ನಿಗದಿಪಡಿಸಿದೆ. ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಾಹನಗಳು ನಗರ ವ್ಯಾಪ್ತಿಗೆ ಸಂಬಂಧಿಸಿವೆ. ಆದರೆ ಈ ಮೋಕ್ಷ ವಾಹಿನಿಯು 60 ಕಿ.ಮೀ. ವ್ಯಾಪ್ತಿಗೆ ಕಾರ್ಯಚರಿಸುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯನ ಯಾಂತ್ರಿಕ ಬದುಕು ಶವ ಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಮಯವಿಲ್ಲದಂತಾಗಿದ್ದು ದುರದೃಷ್ಟಕರ, ಪಟ್ಟಣದ ಪ್ರದೇಶದಲ್ಲಂತೂ ಇಂತಹವರ ಪ್ರಮಾಣ ಇನ್ನೂ ಹೆಚ್ಚಾಗಿದ್ದು ಹೀಗಾಗಿ ಮೃತದೇಹವನ್ನು ಸಾಗಿಸಲು ಮೋಕ್ಷ ವಾಹಿನಿ ಎಂಬ ವಾಹನವನ್ನು ಸಾರ್ವಜನಿಕ ಸೇವೆಗೆ ಅದಿ ಸಮೂಹ ಸಂಸ್ಥೆಯಿಂದ ನಮ್ಮ ಸಮಾಜಕ್ಕೆ ಸಮರ್ಪಿಸಲಾಗಿದೆ. ಮೃತರಾದ ಬಳಿಕ ನಮ್ಮ ಶವ ಸಂಸ್ಕಾರ ಹೀಗೆ ಅಗಬೇಕೆಂಬ ಬಯಕೆ ಯಾರಿಗೂ ಇರುವುದಿಲ್ಲ. ಅದರೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಮ್ಮ ಸಂಘದ ಅಂಗ ಸಂಸ್ಥೆಗಳಾದ ಯುವಕ ಮಂಡಳಿ ಹಾಗೂ ಭಾವಸಾರ ವಿಷನ್ ಇಂಡಿಯಾದಿಂದ ಒಲೆಗಳ ನಿರ್ಮಾಣವಾಗಿದೆ. ಇದೀಗ ಮೃತ ದೇಹವನ್ನು ಮೆರವಣಿಗೆ ಮೂಲಕ ಸಾಗಿಸಲು ಮೋಕ್ಷ ವಾಹಿನಿ ಎಂಬ ಸುಂದರ ವಾಹನವನ್ನು ಅರ್ಪಿಸಲಾಗಿದೆ. ಇದರ ಉಪಯೋಗವನ್ನು ಎಲ್ಲ ಸಮಾಜದವರು ಪಡೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಮೋಹನ್ ಕೃಷ್ಣ, ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಉಪಾಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಗೋಪಾಲ್, ಬಿ.ಸುರೇಶ್ ಕುಮಾರ್, ಸಹಕಾರ್ಯದರ್ಶಿ ವಿನಯ್ ತಾಂದಲೆ, ಮೋಕ್ಷ ವಾಹಿನಿಯ ಚಾಲಕರಾದ ಪ್ರಶಾಂತ್ ತಾಂದಲೆ ಉಪಸ್ಥಿತರಿದ್ದರು.