Wednesday, September 18, 2024
Google search engine
Homeಇ-ಪತ್ರಿಕೆಆದಿವಾಸಿಗಳಿಗೆ ಸರ್ಕಾರಿ ಸೌಲಭ್ಯ ಸಿಗಬೇಕು: 30ನೇ ಆದಿವಾಸಿ ವಿಶ್ವ ಸಮ್ಮೇಳನದಲ್ಲಿ ಶಾಸಕ ಶಾಂತಾರಾಮ್ ಸಿದ್ದಿ ಒತ್ತಾಯ

ಆದಿವಾಸಿಗಳಿಗೆ ಸರ್ಕಾರಿ ಸೌಲಭ್ಯ ಸಿಗಬೇಕು: 30ನೇ ಆದಿವಾಸಿ ವಿಶ್ವ ಸಮ್ಮೇಳನದಲ್ಲಿ ಶಾಸಕ ಶಾಂತಾರಾಮ್ ಸಿದ್ದಿ ಒತ್ತಾಯ

ದಾವಣಗೆರೆ : ಆದಿವಾಸಿ ಜನಾಂಗ ಇಂದಿಗೂ ಹಿಂದುಳಿದಿದೆ, ಅವರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕು, ಸರ್ಕಾರದಿಂದ ಸೂಕ್ತ ಸೌಲಭ್ಯ ಸಿಗಬೇಕು ಎಂದು  ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ತಿಳಿಸಿದರು.ನಗರದ ಬಂಬೂ ಬಜಾರ್ ನ ಶ್ರೀಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ  30ನೇ ಆದಿವಾಸಿ ವಿಶ್ವ ಸಮ್ಮೇಳನದಲ್ಲಿ ಈ ವಿಷಯ ತಿಳಿಸಿದರು.

ಹುಲಿ ಸಂರಕ್ಷಿತ ಅರಣ್ಯ ಸೇರಿ ನಾನಾ ಯೋಜನೆಗಳಿಗಾಗಿ ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸುವ ಸರಕಾರ, ಪುನರ್ವಸತಿ ಕೇಂದ್ರಕ್ಕೆ ಕಳುಹಿಸುತ್ತದೆ. ಆದರೆ, ಹೀಗೆ ಎತ್ತಂಗಡಿಯಾದ ಜನರ ಭೂಮಿ, ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು  ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಆದಿವಾಸಿಗಳಿಗಾಗಿ ರೂಪಿಸುವ ಬಹಳಷ್ಟು ಯೋಜನೆಗಳು ಯಶಸ್ವಿಯಾಗಿಲ್ಲ. ಜಿಪಂ, ತಾಪಂ ಚುನಾವಣೆಯ ನೆಪದಲ್ಲಿ ಇನ್ನೂ ಅರಣ್ಯ ಸಮಿತಿ ಸಭೆ ನಡೆಸಿ, ಕಾಡಂಚಿನ ಜನರ ಸಮಸ್ಯೆ ಆಲಿಸಿಲ್ಲ. ಆದ್ದರಿಂದ ಜನಪ್ರತಿನಿಗಳು, ಅಧಿಕಾರಿಗಳು ಹಾಗೂ ಸಮುದಾಯದ ಪ್ರತಿನಿಗಳು ಒಗ್ಗೂಡಿ ಆದಿವಾಸಿಗಳಿಗೆ ಸಿಗಬೇಕಾದ ಹಕ್ಕು ಕೊಡಿಸಬೇಕು” ಎಂದರು.

`ಪಿಎಚ್ಡಿ ಪದವಿ ಪಡೆದಿರುವ ಆದಿವಾಸಿಗಳು ನಮ್ಮ ಸಮುದಾಯದವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ನಾವು ಇಂತಹ ಸಮುದಾಯಕ್ಕೆ ಸೇರಿದವರು ಎಂದು ಹೇಳಿಕೊಳ್ಳಲು ಯಾರೂ ನಾಚಿಕೆ ಪಡಬಾರದು, ಸ್ವಾಭಿಮಾನದಿಂದ ನಾವು ಇಂತಹ ಸಮಾಜಕ್ಕೆ ಸೇರಿದವರು ಎಂದು ಹೇಳಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಪಿ. ಹರೀಶ್, “ಆದಿವಾಸಿಗಳ ಅಭಿವೃದ್ಧಿಗೆ ಕೇಂದ್ರ ಸರಕಾರವು 24 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಹರಿಹರ ಕ್ಷೇತ್ರದ ರಾಜಗೊಂಡದ ಆದಿವಾಸಿಗಳಿಗೆ ಸರಕಾರದ ಅನುದಾನ ಬಿಡುಗಡೆಗೊಂಡ ತಕ್ಷಣ ಮನೆ ನಿರ್ಮಿಸಿಕೊಡಲಾಗುವುದು” ಎಂದರು.

ಪಿಎಚ್ಡಿ ಪದವಿ ಪಡೆದ ಆದಿವಾಸಿ ಸಮುದಾಯದ 24 ಜನರಿಗೆ ಆದಿವಾಸಿ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ವೀರಗೊಟ ಕನಕ ಗುರು ಶಾಖಾ ಪೀಠದ ಶ್ರೀ ಸಿದ್ಧರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ನ ಎಂ.ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಕೆ.ಎಂ. ಮೇತ್ರಿ, ಮೇದಾರ ಸಮಾಜದ ಮುಖಂಡ ಎಂ. ಚಂದ್ರಶೇಖರ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನವೀನ್, ಪರಿಷತ್ನ ಸೋಮಶೇಖರ್, ಜಯಣ್ಣ, ಸುಂದರ್ ನಾಯ್ಕ್, ಪಿ.ರಾಜೇಶ್, ದಾವಣಗೆರೆ ಜಿಲ್ಲಾ ಆದಿವಾಸಿ ರಕ್ಷಣಾ ಪರಿಷತ್ ಅಧ್ಯಕ್ಷರಾದ ರವಿಕುಮಾರ್ ಎಂ. ಮೇದಾರ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಮೇದಾರ್, ವಿನೋದ್, ರಾಕೇಶ್, ಶ್ರೀನಿವಾಸಗೌಡ, ಕುಮುದಾ, ಜಿ.ಸ್ವಾಮಿ ಇತರರಿದ್ದರು.

RELATED ARTICLES
- Advertisment -
Google search engine

Most Popular

Recent Comments