ಸೆಕ್ಟರ್ ಅಧಿಕಾರಿಗಳಿಗೆ ಕಾರ್ಯಾಗಾರ ಭಯಮುಕ್ತ ಚುನಾವಣೆಗೆ ಎಲ್ಲಾ ಸಿದ್ಧತೆ : ಅಭಿನವ ಖರೆ

ಶಿವಮೊಗ್ಗ : ಜಿಲ್ಲೆಯಲ್ಲಿ ಮುಂಬ ರುವ ವಿಧಾನಸಭಾ ಚುನಾವಣೆ ಯನ್ನು ಭಯಮುಕ್ತ ವಾತಾವರಣ ದಲ್ಲಿ ನಿಷ್ಪಕ್ಷಪಾತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗು ತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿ ಕಾರಿ ಅಭಿನವ ಖರೆ ತಿಳಿಸಿದರು.
ಇಂದು ಕುವೆಂಪು ರಂಗ ಮಂದಿರದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಆಮಿಷ, ಒತ್ತಡಕ್ಕೆ ಒಳಗಾಗಬಹುದಾದ ದುರ್ಬಲ ವರ್ಗಗಳನ್ನು, ದುರ್ಬಲ ಜನರನ್ನು ಗುರುತಿಸುವ ಕಾರ್ಯವನ್ನು ಈಗಿಂದಲೇ ಆರಂಭಿಸಿ ವರದಿಯನ್ನು ನೀಡಲು ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸೆಕ್ಟರ್ ಅಧಿಕಾರಿಗಳು ಪೊಲೀಸ್ ಸೆಕ್ಟರ್ ಅಧಿಕಾರಿಗಳ ಸಹಾಯವನ್ನು ಪಡೆದು ತಮ್ಮ ಕಾರ್ಯ ವ್ಯಾಪ್ತಿಯ ಮತಗಟ್ಟೆ ಪ್ರದೇಶದಲ್ಲಿ ಇಂತಹ ವರ್ಗಗಳನ್ನು ಗುರುತಿಸುವ ಕಾರ್ಯವನ್ನು ಆರಂಭಿಸಿ ಮಾರ್ಚ್ ೨೫ರ ಒಳಗಾಗಿ ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿ ಅವರಿಗೆ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.
ಯಾವುದೇ ಹಿಂಸಾಚಾರ ಇಲ್ಲದೆ ಸುಸೂತ್ರವಾಗಿ ಚುನಾವಣೆ ನಡೆದರೆ ಸಾಲದು. ಪ್ರತಿಯೊಬ್ಬರೂ ನಿರ್ಭೀತಿ ಯಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವುದನ್ನು ಖಾತ್ರಿಪಡಿ ಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕೆಲವು ವರ್ಗಗಳ ದುರ್ಬಲ ಜನರನ್ನು ಭಯಪಡಿಸಿ, ಅಥವಾ ಆಮಿಷಗಳನ್ನು ಒಡ್ಡಿ ಮತಗಟ್ಟೆಗಳಿಂದ ದೂರವಿರಿಸುವ ಪರಿಪಾಟವಿದೆ. ಅಂತಹ ಶಕ್ತಿಗಳನ್ನು ಹಾಗೂ ದುರ್ಬಲ ವರ್ಗಗಳನ್ನು ಈಗಲೇ ಗುರುತಿಸಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಲೋಕೇಶ್ ಮಾತನಾಡಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಈ ಹಿಂದಿನ ಘಟನೆಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಆದರೆ ಒತ್ತಡಕ್ಕೆ ಒಳಗಾಗಬಹುದಾದ ಜನರು ಮತ್ತು ಪ್ರದೇಶವನ್ನು ಸೆಕ್ಟರ್ ಅಧಿಕಾರಿಗಳು ಮಾಹಿತಿಯನ್ನು ಸಂಗ್ರಹಿಸಿ, ತಳಮಟ್ಟದಲ್ಲಿ ಭೇಟಿ ನೀಡಿ ಜನರೊಂದಿಗೆ ಮಾತನಾಡಿ ಅವರು ನೀಡುವ ವರದಿಯ ಆಧಾರದಲ್ಲಿ ನಿರ್ಧರಿಸಲಾಗುತ್ತದೆ ಎಂದರು.

SHARE
Previous article15 MAR 2018
Next article16 MAR 2018

LEAVE A REPLY

Please enter your comment!
Please enter your name here