ಹೊಸನಗರ: ಮಲೆನಾಡಿನಾಧ್ಯಂತ ಮಳೆ ಮುಂದುವರೆದಿದ್ದು, ಮಳೆಹಾನಿಗಳು ಕೂಡ ಹೆಚ್ಚಾಗುತ್ತಿವೆ.
ಬುಧವಾರ ಮುಂಜಾನೆ ಹೊಸನಗರ ಸಾಗರ ರಸ್ತೆಯ ಮೂಲಗದ್ದೆ ನಿಲ್ದಾಣದ ಬಳಿ ಬಾರೀ ಗಾತ್ರದ ಮರ ಉರುಳಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.
ಬಳಿಕ ಸ್ಥಳೀಯರು ಬಿನ್ನಿ ನೇತೃತ್ವದಲ್ಲಿ ಮರವನ್ನು ತೆರವುಗೊಳಿಸುವ ಮೂಲಕ ಸಂಚಾರ ಸುಗಮಗೊಳಿಸಿದರು.
ರಸ್ತೆ ಅಗಲೀಕರಣ ಎಫೆಕ್ಟ್:
ರಸ್ತೆ ಅಗಲೀಕರಣ ವೇಳೆ ಮರಗಳ ಬುಡ ಬಿಡಿಸಿ, ಕೆಲ ಬೇರುಗಳನ್ನು ಕತ್ತರಿಸಿರುವುದು ಈ ಅವಘಡಕ್ಕೆ ಕಾರಣ. ರಸ್ತೆ ಬದಿಯ ಒಂದೊಳ್ಳೆ ಬೃಹತ್ ನೇರಳೆ ಮರ ಇದಕ್ಕೆ ಆಹುತಿ ಆಗಿದೆ. ಹೊಸನಗರದಿಂದ ಸಾಗರದ ತನಕ ಮರಗಳ ಸ್ಥಿತಿ ಹೀಗೆ ಇದೆ. ಯಾವಾಗ ಬೇಕಾದರೂ ಧರೆಗುರುಳುವ ಸ್ಥಿತಿ ಇದೆ .