ಶಿವಮೊಗ್ಗ: ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದು ಕಾಂಗ್ರೆಸ್ ಎಂದು ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ ಶ್ರೀನಿವಾಸ್ ತಿಳಿಸಿದರು.
ಇತ್ತೀಚೆಗೆ ಕಾಂಗ್ರೆಸ್ ಸೇರಿದ ಆರ್.ಶ್ರೀಧರ ಹುಲ್ತಿಕೊಪ್ಪ ಮತ್ತು ಬಾಸೂರು ಚಂದ್ರೇಗೌಡ ಅವರು ಪಕ್ಷದ ಕಛೇರಿಯಲ್ಲಿ ನಡೆದ ಸದಸ್ಯತ್ವ ಸ್ವೀಕಾರ ಸಮಾರಂಭದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರಿಗೆ, ದಲಿತರಿಗೆ ಅಲ್ಪಸಂಖ್ಯಾತರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂದರೆ ಅದು ಕಾಂಗ್ರೆಸ್, ತಂತ್ರಜ್ಞಾನದಲ್ಲಿ ಕ್ರಾಂತಿ ಉಂಟುಮಾಡಿರುವುದು ರಾಜೀವ್ ಗಾಂಧಿ ಹೊರತು ಮೋದಿ ಅಲ್ಲ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸಚಿವರೆಲ್ಲರೂ ಕ್ರಿಮಿನಲ್ ಕೇಸ್ ಹಾಕಿಸಿಕೊಂಡರು. ಆದರೆ ಕಳೆದ ನಾಲ್ಕು ವರ್ಷದಲ್ಲಿ ಕಾಂಗ್ರೆಸ್ ಭ್ರಷ್ಠಾಚಾರ ಮುಕ್ತ ಆಡಳಿತ ನೀಡಿದೆ. ಬಿಜೆಪಿ ರಾಜ್ಯದಲ್ಲಿ ಕೋಮು ಗಲಭೆಗೆ ಮಾಡಿ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಮಂಗ ಳೂರು ಗಲಭೆಗೆ ಬಿಜೆಪಿ ನೇರ ಹೊಣೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಶಿಕಾರಿಪುರ ದಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡ್ಡಿಯೂರಪ್ಪನವರನ್ನು ಸೋಲಿ ಸಲು ತಳಮಟ್ಟದಿಂದ ಕೆಲಸಮಾಡು ವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡ ಆರ್.ಶ್ರೀಧರ್ ಹುಲ್ತಿಕೊಪ್ಪ ಮತ್ತು ಆನವಟ್ಟಿಯ ಬಾಸೂರು ಚಂದ್ರೇ ಗೌಡ ಅವರು ಕಾಂಗ್ರೆಸ್‌ನ ಸದಸ್ಯತ್ವ ಸ್ವೀಕಾರ ಮಾಡಿದರು.
ರಾಮೇಗೌಡ, ವೈ.ಹೆಚ್. ನಾಗ ರಾಜ್, ವಿಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಮೊದಲಾದವರಿದ್ದರು.