Thursday, December 5, 2024
Google search engine
Homeಇ-ಪತ್ರಿಕೆಸಾಗರ: ಬುಡಸಹಿತ ಮುರಿದು ಬಿದ್ದ ಬೃಹತ್‌ ಮರ: ತಪ್ಪಿದ ಭಾರೀ ದುರಂತ

ಸಾಗರ: ಬುಡಸಹಿತ ಮುರಿದು ಬಿದ್ದ ಬೃಹತ್‌ ಮರ: ತಪ್ಪಿದ ಭಾರೀ ದುರಂತ

ಸಾಗರ: ಸಾಗರದ ರಾಘವೇಂದ್ರ ಮಠದ ಪಕ್ಕದಲ್ಲಿದ್ದ ಬೃಹತ್ ಮಾವಿನ ಮರವೊಂದು ಗುರುವಾರ ಬುಡಸಹಿತ ಮುರಿದು ಬಿದ್ದಿದ್ದು ದೊಡ್ಡ ಅನಾಹುತ ತಪ್ಪಿದೆ. ವಿಪರೀತ ಮಳೆಯಿಂದಾಗಿ ಮಾವಿನ ಮರ ಏಕಾಏಕಿ ಮುರಿದು ಬಿದ್ದಿದ್ದು ರಾಘವೇಂದ್ರ ಸ್ವಾಮಿ ಮಠದ ಪಕ್ಕದ ರಸ್ತೆ ಸಂಚಾರ ಕೆಲವು ಕಾಲ ಬಂದ್ ಆಗಿತ್ತು. ಮರದ ಬಿದ್ದಿದ್ದರಿಂದ ಮಠದ ಗೋಡೆಗೆ ಸ್ವಲ್ಪ ಹಾನಿಯಾಗಿದೆ. ಮರದ ಪಕ್ಕದಲ್ಲಿದ್ದ ಟ್ರಾನ್ಸ್‍ಫಾರ್ಮರ್ ಮರದಡಿ ಸಿಲುಕಿ ಪುಡಿಪುಡಿಯಾಗಿದೆ.

ಈ ರಸ್ತೆಯಲ್ಲಿ ಹೆಚ್ಚಿನ ಜನ ಸಂಚಾರ ಇರುತಿತ್ತು. ಜೊತೆಗೆ ಗುರುವಾರ ಆಗಿದ್ದರಿಂದ ಮಠಕ್ಕೆ ಬರುವ ಭಕ್ತರ ಸಂಖ್ಯೆ ಸಹ ಜಾಸ್ತಿ ಇತ್ತು. ಆದರೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ನಗರಸಭೆಯಿಂದ ತಕ್ಷಣ ಕಾರ್ಯಾಚರಣೆ: ಮರ ಬಿದ್ದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಬೃಹತ್ ಮರವನ್ನು ನಗರಸಭೆ ಮತ್ತು ಅರಣ್ಯ ಇಲಾಖೆಯವರ ಸಹಾಯದಿಂದ ಕಟಾವು ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ವಿಪರೀತ ಮಳೆಯಿಂದ ನಗರವ್ಯಾಪ್ತಿಯಲ್ಲಿ ಸಣ್ಣಪುಟ್ಟ ಮಳೆಹಾನಿಯಾಗಿದೆ. ಶಾಸಕರು ಮತ್ತು ಆಡಳಿತಾಧಿಕಾರಿಗಳ ಸೂಚನೆ ಮೇರೆಗೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ನಗರಸಭೆಯಿಂದ ಅಗತ್ಯ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ. ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು, ವಾಹನ ಸವಾರರು ಹೆಚ್ಚು ಜಾಗೃತೆಯಿಂದ ಇರಬೇಕು. ಪೋಷಕರು ತಮ್ಮ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

…………………………

ಗಾಂಧಿನಗರ ರಾಘವೇಂದ್ರಸ್ವಾಮಿ ಮಠದ ಪಕ್ಕದಲ್ಲಿ ಮಾವಿನ ಮರ ಬಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ರಸ್ತೆ ಸಂಚಾರಕ್ಕೆ ಸ್ವಲ್ಪಕಾಲ ಅಡ್ಡಿಯಾಗಿತ್ತು. ತಕ್ಷಣ ಮರವನ್ನು ತೆರವುಗೊಳಿಸಲಾಗಿದೆ.
– ಹೆಚ್.ಕೆ.ನಾಗಪ್ಪ, ಪೌರಾಯುಕ್ತ

RELATED ARTICLES
- Advertisment -
Google search engine

Most Popular

Recent Comments