Saturday, October 12, 2024
Google search engine
Homeಇ-ಪತ್ರಿಕೆಅಳೆತ್ತರ ಬಿದ್ದ ಕಸದ ರಾಶಿ - ನಗರ ವೀಕ್ಷಣೆ ವೇಳೆ ಮಹಾ ದರ್ಶನ

ಅಳೆತ್ತರ ಬಿದ್ದ ಕಸದ ರಾಶಿ – ನಗರ ವೀಕ್ಷಣೆ ವೇಳೆ ಮಹಾ ದರ್ಶನ

ಪಾಲಿಕೆ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಅಧಿಕಾರಿಗಳು ಗರಂ

ಶಿವಮೊಗ್ಗ : ನಗರದ ಬುದ್ದನಗರ, ಆರ್.ಎಂ.ಎಲ್ ನಗರ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಸೇರಿದಂತೆ ನಗರದ ವಿವಿಧಡೆಗಳಗೆ ಜೂ. ೧೧ ರಂದು ಮಂಗಳವಾರ ಶಿವಮೊಗ್ಗ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ದಿಢೀರ್‌ ಭೇಟಿ ನೀಡಿ, ಇಲ್ಲಿನ ಸ್ವಚ್ಚತೆ ಕಾರ್ಯಗಳನ್ನು ಪರಿಶೀಲಿಸಿದರು. ಅಲ್ಲದೆ, ಅಲ್ಲಿನ ಹಲವಡೆಗಳಲ್ಲಿ ಮೋರಿಗಳಲ್ಲಿ ಕೊಳಚೆ ನೀರು ಹರಿದು ಹೋಗದ ನಿಂತಿದ್ದನ್ನು ಕಂಡು ಸಿಟ್ಟಾದ ಅಧಿಕಾರಿಗಳು, ತಕ್ಷಣವೇ ಅದನ್ನು ತೆರವುಗೊಳಿಸಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಬುದ್ದನಗರ, ಆರ್.ಎಂ.ಎಲ್ ನಗರ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ಹರಕೆರೆ, ನ್ಯೂ ಮಂಡ್ಲಿ, ಊರುಗಡೂರು. ಮದಾರಿ ಪಾಳ್ಯ ವಿದ್ಯಾನಗರ, ರಾಜೀವ್ ಗಾಂಧಿ ಬಡಾವಣೆ, ಟ್ಯಾಂಕ್ ಮೊಹಲ್ಲಾ, ಶಾಂತಿನಗರ, ರಾಗಿಗುಡ್ಡ, ಶಾಂತಿನಗರ-ನವುಲೆ ಪ್ರದೇಶಗಳಿಗೆ ಭೇಟಿ ಕೊಟ್ಟರು. ಹಲವೆಡೆಗಳಲ್ಲಿನ ಮುಖ್ಯ ರಸ್ತೆ ಚಾನೆಲ್ ಬಳಿ, ಮ್ಯಾಕ್ಸ್ ಆಸ್ಪತ್ರೆ ಪಕ್ಕದಲ್ಲಿರುವ ಕನ್ನರ್‍ವೆನ್ಸಿ ರಸ್ತೆ ಹಾಗೂ ಇತರೆ ಪ್ರದೇಶಗಳಲ್ಲಿ ವೀಕ್ಷಣೆ ನಡೆಸಿದರು.

 ಸಾಗರ ರಸ್ತೆ ಬಿ.ಎಸ್.ಎನ್.ಎಲ್ ಕಛೇರಿ ಬಳಿ ಇರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಮತ್ತು ನಗರ ಸ್ವಚ್ಚತೆ ಬಗ್ಗೆ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌಧರಿ,  ಲೋಕಾಯುಕ್ತ ಠಾಣೆಯ ಅಧಿಕಾರಿ ಉಮೇಶ್ ಈಶ್ವರ ನಾಯ್ಕ, ಡಿ.ಎಸ್.ಪಿ ಮತ್ತು ಪೊಲೀಸ್‌ ನಿರೀಕ್ಷಕರುಗಳಾದ ಸುರೇಶ್ ಹೆಚ್.ಎಸ್,  ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿಗಳೊಂದಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ್ದರು.

ಹಲವಾರು ದಿವಸಗಳಿಂದ ರಸ್ತೆಗಳಲ್ಲಿ ಬಿದ್ದಿರುವ ಕಸಗಳನ್ನು ತೆಗೆಯದೆ ಹಾಗೆ ಬಿಟ್ಟಿರುವ ಪ್ರದೇಶಗಳನ್ನು ಗುರುತಿಸಿ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಅಧಿಕಾರಿಗಳಿಗೆ ಕೂಡಲೇ ಈ ಸ್ಥಳಗಳನ್ನು ಸ್ವಚ್ಛಗೊಳಿಸಬೇಕೆಂದು, ಚರಂಡಿಗಳು ಮತ್ತು ಡ್ರೈನೇಜ್ ಸ್ವಚ್ಚ ಮಾಡಿಸುವಂತೆ ಸೂಚನೆ ನೀಡಲಾಯಿತು.

RELATED ARTICLES
- Advertisment -
Google search engine

Most Popular

Recent Comments