ಸಾಗರ : ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ಬೃಹತ್ ಲೋಕ ಅದಾಲತ್ ನಡೆಯಿತು. ಈ ಸಂದರ್ಭದಲ್ಲಿ ನೂರಾರು ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು.
ಅದಾಲತ್‌ನಲ್ಲಿ 25 ವರ್ಷಗಳ ಹಣಕಾಸಿನ ಪ್ರಕರಣವನ್ನು ರಾಜಿ ಮೂಲಕ ನ್ಯಾಯಾಧೀಶರು ಇತ್ಯರ್ಥಪಡಿಸಿದರು. ಹಣಕಾಸಿನ ಪ್ರಕರಣ, ಚೆಕ್ ಸಂಬಂಧಿ ೩೦ಕ್ಕೂ ಹೆಚ್ಚು ಪ್ರಕರಣ ಲೋಕ ಅದಾಲತ್ ಮೂಲಕ ಇತ್ಯರ್ಥ ಪಡಿಸಲಾಯಿತು.
ಮುಖ್ಯವಾಗಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳನ್ನು ಲೋಕ ಅದಾಲತ್‌ನಲ್ಲಿ ಮನವೊಲಿಸಿ ದಂಪತಿಗಳನ್ನು ಒಂದು ಮಾಡಲಾಯಿತು. ದಂಪತಿಗಳ ಪರ ನ್ಯಾಯವಾದಿಗಳಾದ ಕೆ.ವಿ.ಪ್ರವೀಣ್, ಆರೀಫ್ ಆಲಿಖಾನ್, ಎಸ್.ಬಿ. ಶ್ರೀಧರ್ ವಾದ ಮಂಡಿಸಿದರು.
ನ್ಯಾಯಾಧೀಶರಾದ ಎಸ್.ನಟರಾಜ್, ಶ್ರೀಶೈಲ ಭೀಮಸೇನಾ ಬಗಾಡಿ, ದೀಪಾ ಹಾಜರಿದ್ದರು.