Sunday, November 10, 2024
Google search engine
Homeಇ-ಪತ್ರಿಕೆಮೊಬೈಲ್‌ ಕಳವಿನ ಒಂದು ಪ್ರಕರಣ: ಹದಿನಾರು ಮೊಬೈಲ್ ವಶ

ಮೊಬೈಲ್‌ ಕಳವಿನ ಒಂದು ಪ್ರಕರಣ: ಹದಿನಾರು ಮೊಬೈಲ್ ವಶ

ಶಿವಮೊಗ್ಗ: ಒಂದು ಮೊಬೈಲ್‌ ಕಳವು ಪ್ರಕರಣದಲ್ಲಿ ಭದ್ರಾವತಿ ಹಳೆ ನಗರ ಪೊಲೀಸರು, ೧೬ ಮೊಬೈಲ್‌ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ನಿವಾಸಿ ಕಿರಣ್‌ ಅವರು  ಭದ್ರಾವತಿ ನಗರದ ಸಿ.ಎನ್ ರಸ್ತೆ ಡಬಲ್ ಟಾಕೀಸ್ ಎದುರುಗಡೆ ಮೊಬೈಲ್ ಪೋನ್‌ನಲ್ಲಿ ಮಾತನಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಗಳಿಬ್ಬರು,ಹಿರೋ ಸ್ಪ್ಲೆಂಡರ್ ಬೈಕಿನಲ್ಲಿ ಬಂದು ಮೊಬೈಲ್ ಅನ್ನು ಕಸಿದುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ತನಿಖಾ ತಂಡವು ಜೂ.26 ರಂದು ಆರೋಪಿ ಮುಜಾಮಿಲ್ ಅಲಿಯಾಜ್ ಮುಜ್ಜು ಈತನನ್ನು ದಸ್ತಗಿರಿ ಮಾಡಿ, ಒಟ್ಟು ರೂ.3,09,000 ಮೌಲ್ಯದ 16 ಮೊಬೈಲ್ ಮತ್ತು 01 ಬೈಕನ್ನು ವಶಪಡಿಸಿಕೊಳ್ಳಲಾಗಿದೆ.


ಈ ತನಿಖಾ ತಂಡವು ಜೂ.26 ರಂದು ಪ್ರಕರಣದ ಆರೋಪಿ ಮುಜಾಮಿಲ್ ಅಲಿಯಾಜ್ ಮುಜ್ಜು (19 ವರ್ಷ), ಬಿಲ್ಲೇಹಳ್ಳಿ ಗ್ರಾಮ, ಬುಕ್ಕಾಂಬುದಿ, ಚಿಕ್ಕಮಗಳೂರು ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಆತನಿಂದ ಮೇಲ್ಕಂಡ ಪ್ರಕರಣದ ಅಂದಾಜು ಮೌಲ್ಯ ರೂ.29,000 ಮೊಬೈಲ್ ಮತ್ತು ಮೊಬೈಲ್ ಕಳೆದುಹೋದ ಬಗ್ಗೆ ಸಿಇಐಆರ್ ಪೆÇೀರ್ಟಲ್‍ನಲ್ಲಿ ವರದಿಯಾದ ಅಂದಾಜು ಮೌಲ್ಯ ರೂ.2,50,000 ವಿವಿಧ ಕಂಪನಿಯ 15 ಮೊಬೈಲ್‍ಗಳು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ ರೂ.30,000 ಬೈಕ್ ಸೇರಿ ಒಟ್ಟು ರೂ.3,09,000 16 ಮೊಬೈಲ್ ಫೆÇನ್ ಮತ್ತು 01 ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಹಳೇನಗರ ಪೆÇಲೀಸ್ ಠಾಣಾ ಗುನ್ನೆ ಸಂಖ್ಯೆ : 0111/2024 ಕಲಂ 392 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಶ್ ಅಧೀಕ್ಷಕ ಮಿಥುನ್ ಕುಮಾರ್.ಜಿ.ಕೆ. ಐಪಿಎಸ್, ಹೆಚ್ಚುವರಿ ಪೋಲೀಸ್ ಅಧೀಕ್ಷಕರು-1 ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಹೆಚ್ಚುವರಿ ಪೆÇಲೀಸ್ ಅಧೀಕ್ಷಕರು-2 ಕಾರಿಯಪ್ಪ.ಎ.ಜಿ ಅವರ ಮಾರ್ಗದರ್ಶನದಲ್ಲಿ ಭದ್ರಾವತಿ ಪ್ರಭಾರ ಪೆÇಲೀಸ್ ಉಪಾಧೀಕ್ಷಕ ಗಜಾನನ ವಾಮನ ಸುತಾರ್ ಮತ್ತು ಭದ್ರಾವತಿ ನಗರ ವೃತ್ತ ನಿರೀಕ್ಷಕ ಶೈಲಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಶರಣಪ್ಪ.ಹೆಚ್, ಹಳೆನಗರ ಪೆÇಲೀಸ್ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಗಳಾದ ಹೆಚ್‍ಸಿ ಹಾಲಪ್ಪ, ಪಿಸಿ ನಾರಾಯಣ ಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ.ಎಸ್ ಮತ್ತು ಪ್ರವೀಣ್ ಅವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಶಿವಮೊಗ್ಗ ಜಿಲ್ಲೆ ಪೆÇಲೀಸ್ ಅಧೀಕ್ಷಕರು ಪ್ರಶಂಸಿಸಿ  ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments