Saturday, October 12, 2024
Google search engine
Homeಇ-ಪತ್ರಿಕೆಸೂರಜ್ ರೇವಣ್ಣ ವಿರುದ್ಧದ 2ನೇ ದೂರು ಸಿಐಡಿಗೆ ಹಸ್ತಾಂತರ

ಸೂರಜ್ ರೇವಣ್ಣ ವಿರುದ್ಧದ 2ನೇ ದೂರು ಸಿಐಡಿಗೆ ಹಸ್ತಾಂತರ

ಹಾಸನ: ವಿಧಾನ ಪರಿಷತ್ ಸದಸ್ಯ​ ಡಾ.ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಎರಡನೇ ಕೇಸ್ ಕೂಡ ಸಿಐಡಿಗೆ ಹಸ್ತಾಂತರ ಮಾಡಿ ಸರ್ಕಾರ ಆದೇಶಿಸಿದೆ.

ಹೊಳೆನರಸೀಪುರ ಗ್ರಾ. ಠಾಣೆಯಲ್ಲಿ ನಿನ್ನೆ(ಮಂಗಳವಾರ) ಮತ್ತೊಂದು ದೂರು ದಾಖಲಾದ ಹಿನ್ನಲೆ ಈ ಪ್ರಕರಣವನ್ನು ಕೂಡ ಸಿಐಡಿಗೆ ಹಸ್ತಾಂತರ ಮಾಡಿ ಆದೇಶಿಸಲಾಗಿದೆ. ಮೊದಲ ಪ್ರಕರಣದಲ್ಲಿ ಅರಕಲಗೂಡು ಮೂಲದ ಯುವಕ ದೂರು ನೀಡಿದ್ದರೆ,  2ನೇ ಪ್ರಕರಣದಲ್ಲಿ ಹೊಳೆನರಸೀಪುರ ಮೂಲದ ಯುವಕ ದೂರು ನೀಡಿದ್ದಾನೆ.

4 ವರ್ಷದ ಹಿಂದೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ನಾನು ದೂರು ನೀಡಿರುವುದರ ಹಿಂದೆ ಯಾರ ಕೈವಾಡ ಇಲ್ಲ ಎಂದು 2ನೆ ದೂರುದಾರ ಹೇಳಿದ್ದಾನೆ.

RELATED ARTICLES
- Advertisment -
Google search engine

Most Popular

Recent Comments