Tuesday, November 5, 2024
Google search engine
Homeಇ-ಪತ್ರಿಕೆಆರಗ ಕುರಿತ ಆಯನೂರು ಆರೋಪ ಸುಳ್ಳು: ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿಕೆ

ಆರಗ ಕುರಿತ ಆಯನೂರು ಆರೋಪ ಸುಳ್ಳು: ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿಕೆ

ಶಿವಮೊಗ್ಗ: ಶಾಸಕ ಆರಗ ಜ್ನಾನೇಂದ್ರರ ಐದನೇ ಬಾರಿ ಆಯ್ಕೆ ಪ್ರಾಮಾಣಿಕತೆ ಗೆ ಸಾಕ್ಷಿ. ಸೋತಾಗಲೂ ಅನುದಾನ ತಂದಿರುವ ಕೀರ್ತಿ ಇದೆ. ಆದರೂ ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದ್ದಾರೆ.
ಗುರುವಾರ ಜಿಲ್ಲಾ  ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ವಸತಿ ಕಟ್ಟಡ ಉದ್ಘಾಟನೆಯ ವೇಳೆ ವೇದಿಕೆ ಮೇಲಿದ್ದ ಕಾಂಗ್ರೆಸ್ ಪ್ರಮುಖರೇ ಜ್ನಾನೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ. ಕ್ಷೇತ್ರಕ್ಕೆ ತಂದ ಅನುದಾನ ಶ್ಲಾಘನೀಯ ಎಂದಿದ್ದಾರೆ.ಆದರೆ ಸಲ್ಲದ ಟೀಕೆ ಆಯನೂರು ಮಂಜುನಾಥ್‌ಗೆ ಸಲ್ಲದು. ಅವರ ಮಾತು ಖಂಡನೀಯ, ರಾಜಕೀಯ ರಚನಾತ್ಮಕವಾಗಿ ಮಾಡಲಿ. ಪೂರ್ವಾಗ್ರಹ ಪೀಡಿತ ಸಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸುವ ಕೊರೆದಿರುವಲ್ಲಿ ನೀರು ಜಿನುಗಿದೆ. ಸರಿಯಾದ ಮಾಹಿತಿ ಪಡೆಯದೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ತೀರ್ಥಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ಹೆದ್ದೂರು ಮಾತನಾಡಿ, ತೀರ್ಥಹಳ್ಳಿ ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಜ್ನಾನೇಂದ್ರ ಆರೋಪ, ಕಪ್ಪು ಚುಕ್ಕೆ ಹೊಂದಿಲ್ಲದ ರಾಜ್ಯದ ನಾಯಕ. ಯಡಿಯೂರಪ್ಪ ಜೊತೆಗೆ ರಾಜಕೀಯ ಆರಂಭ ಮಾಡಿ. ಐದು ಅವಧಿ ಶಾಸಕ ಆಗಿದ್ದರೂ ಅವರು ಎಂದಿಗೂ ಮಂತ್ರಿಗಿರಿಗೆ ಲಾಭಿ ಮಾಡಿಲ್ಲ. ಒಂದೂವರೆ ವರ್ಷ ಮಂತ್ರಿ ಆಗಿದ್ದರು, ಕಳೆದ ಅವಧಿಯಲ್ಲಿ ೩೫೦೦ ಕೋಟಿ ಅನುದಾನ ತಂದಿದ್ದಾರೆ. ಸೇತುವೆ, ರಸ್ತೆ, ಶಾಲಾ ಕಟ್ಟಡ ಸೇರಿ ಅನುದಾನ ತಂದಿದ್ದು, ಹಿಂದೆ ಯಾವ ಜನಪ್ರತಿನಿಧಿ ಕೂಡ ಅಷ್ಟು ಅನುದಾನವನ್ನು ತೀರ್ಥಹಳ್ಳಿಗೆ ತಂದಿಲ್ಲ ಎಂದರು.

 ಈಗ ಅಧಿಕಾರ ಇರುವ ಪಕ್ಷದಲ್ಲಿ ಇದ್ದಾರೆ, ತನಿಖೆ ಮಾಡಿಸಲಿ, ಎಲ್ಲಾ ತನಿಖಾ ತಂಡಗಳು ಅವರ ಸರ್ಕಾರದ ಬಳಿಯೇ ಇದೆ. ಆರೋಪ ಸಾಬೀತಾಗಲಿ. ಹಿಟ್ ಅಂಡ್ ರನ್ ಬೇಡ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿನ್ಸೆಂಟ್ ರೋಡ್ರಿಗಸ್, ಕೆ ವಿ ಅಣ್ಣಪ್ಪ, ಮಾಲತೇಶ್, ಕುಪೇಂದ್ರ, ರತ್ನಾಕರ ಶೆಣೈ ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments