ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಕಂಡರೆ ಭಯ : ಹೆಚ್.ಡಿ. ರೇವಣ್ಣ

ಶಿವಮೊಗ್ಗ : ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಗೆ ಭಯ ಪಡುತ್ತಿವೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ ರೇವಣ್ಣ ಹೇಳಿದರು.
ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಜನತೆಗೆ ಉತ್ತಮ ಆಡಳಿತ ದೊರಕಿಲ್ಲ. ಇದರಿಂದಾಗಿ ಆ ಪಕ್ಷಗಳ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ ಎಂದರು.
ನಮ್ಮ ಪಕ್ಷದ ೧೪೦ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧಗೊಂಡಿದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಬಿಡುಗಡೆ ಗೊಳಿಸಲಾಗುವುದು ಎಂದು ಅವರು, ೨೨೪ ಮತ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸ ಲಾಗುವುದು. ೧೧೩ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ ಎಂದರು ಹೇಳಿದರು.
ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಯವರದ್ದು ೧೫೦ ಸ್ಥಾನ ಗೆದ್ದುಬರಲು ವಿಷನ್ ೧೫೦ಮಾಡಿಕೊಂಡಿದ್ದಾರೆ. ನಿಮ್ಮ ವಿಷನ್ ಎಷ್ಟು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಇರುವ ೨೨೪ಸ್ಥಾನಗಳಲ್ಲಿ ಬಿಜೆಪಿ ೧೫೦ಸ್ಥಾನ, ಕಾಂಗ್ರೆಸ್ ೧೫೦ಸ್ಥಾನ ಎಂದು ಹೇಳಿಕೊಳ್ಳುತ್ತಿದೆ. ಆದರೆ ಇರುವುದೇ ೨೨೪ಸ್ಥಾನ. ಆದ್ದರಿಂದ ಜೆಡಿಎಸ್ ೧೧೩ಸ್ಥಾನ ಗೆಲುವಿನ ಗುರಿಹೊಂದಿದೆ ಎಂದು ವಿವರಿಸಿದರು.
ಹೊಸದಾಗಿ ನಟ ಉಪೇಂದ್ರ ಅವರ ನೇತೃತ್ವದಲ್ಲಿ ಕೆಪಿಜೆಪಿ ಹಾಗೂ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ನೇತ್ರತ್ವ ದಲ್ಲಿ ಬಿಜೆಸಿ ಪಕ್ಷ ಉದಯವಾಗುತ್ತಿದೆ ಈ ಪಕ್ಷಗಳ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪಕ್ಷ ಉದಯದ ಬಗ್ಗೆ ನಮಗೆ ಗೌರವವಿದೆ. ಜನರಲ್ಲಿ ಇವರು ವಿಶ್ವಾಸ ಮೂಡಿಸಿ ಅಧಿಕಾರಕ್ಕೆ ಬಂದಲ್ಲಿ ನಾವು ಶುಭ ಹಾರೈಸುತ್ತೇವೆ. ಆದರೆ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ್ ರೀತಿಯಲ್ಲಿ ಮಾತನಾಡಿ ಸಣ್ಣತನ ಪ್ರದರ್ಶಿಸುವುದಿಲ್ಲ ಎಂದರು.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತ ಬರವಿದೆ. ಇದರಿಂದಾಗಿ ೪೪,೫೪,೭೯೩ ತೆಂಗಿನ ಮರಗಳು ಹಾಗೂ ೧,೮೩,೧೨ ಅಡಿಕೆ ಮರಗಳು ನಾಶಗೊಂಡಿವೆ. ಈ ಬಗ್ಗೆ ಸರ್ಕಾರಕ್ಕೆ ಸಂಬಂಧಪಟ್ಟ ಇಲಾಖೆ ವರದಿ ನೀಡಿದ್ದರೂ ಸಹ ಎರಡೂ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರದಿರು.
ಜೆಡಿಎಸ್‌ನಲ್ಲಿ ತಾವು ಸಹ ಮುಖ್ಯಮಂತ್ರಿಗಳ ಅಭ್ಯರ್ಥಿ ಆಕಾಂಕ್ಷಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಣ್ಷ ನಾನು ಅಕಾಂಕ್ಷೆ ಅಲ್ಲ. ಆದರೆ ನಾನು ರೈತರ ಸಮಸ್ಯೆ ಪರಿಹರಿಸುವ ಅಭ್ಯರ್ಥಿಯಾಗಿದ್ದೇನೆ. ಕುಮಾರ ಸ್ವಾಮಿ ಯವರು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಜೆಡಿಎಸ್ ರೈತರ ಪಕ್ಷವಾಗಲಿದೆ. ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕಿ ಶಾರದಾ ಪೂರ್ಯನಾಯ್ಕ, ಜೆಡಿಎಸ್ ಜಿಲ್ಲಾಧ್ಯಕ್ಷ ನಿರಂಜನ್, ಪಾಲಿಕೆ ಮೇಯರ್ ಏಳುಮಲೈ ಬಾಬು, ಮಾಜಿ ಶಾಸಕ ಮಾದಪ್ಪ , ಟಿ.ಬಿ. ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು