ಲೇಖನ : ಬಿ.ನಾಗರಾಜ್
ಪರೀಕ್ಷೆ ಬಂತು ಪರೀಕ್ಷೆ
ಮಾರ್ಚ ತಿಂಗಳು ಆರಂಭವಾಯಿತೆಂದರೆ, ಯುಕೆಜಿಯಿಂದ ಹಿಡಿದು 10ನೇ ತರಗತಿ ಓದುತ್ತಿರುವ ಮಕ್ಕಳಿಗೆ ಪರೀಕ್ಷೆಯ ಕಾಲ. ಬಹುತೇಕ ಕುಟುಂಬಗಳಲ್ಲಿ ಮಕ್ಕಳಿಗಿಂತ ಪೋಷಕರಿಗೆ ಹೆಚ್ಚು ಟೆನ್ಷನ್. ಹೀಗಾಗಿ ಮಕ್ಕಳಿಗೆ ‘ಪರೀಕ್ಷೆ ಬಂತು’ ಓದ್ಕೋ ಹೋಗು’ ಎಂದು ಮುಖ್ಯವಾಗಿ ತಾಯಂದಿರು ಮಕ್ಕಳಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ.
ಈ ನಡುವೆ ದೊಡ್ಡ ಮಕ್ಕಳನ್ನು ಓದಿಸುವುದು ಒಂದು ಚಾಲೆಂಜ್. ಆದರೆ ಚಿಕ್ಕ ಮಕ್ಕಳನ್ನು ಓದಿಸುವುದು ಇನ್ನೊಂದು ಚಾಲೆಂಜ್. ಉದಾಹರಣೆಗೆ 10 ವರ್ಷ ದೊಳಗಿನ ಮಕ್ಕಳನ್ನು ಓದಿಸುವುದು ತಾಯಂದಿರಿಗೆ ಬಹು ದೊಡ್ಡ ಸಮಸ್ಯೆ ಅಮ್ಮಂದಿರು ತಾವೇ ಪರೀಕ್ಷೆ ಬರೆಯುವಷ್ಟು ಒತ್ತ ಡದಲ್ಲಿರುತ್ತಾರೆ.ಶಾಲೆಯಲ್ಲಿ ಮಕ್ಕಳ ತಿಳುವಳಿಕೆಗೂ ಮೀರಿ ಕಲಿಸುತ್ತಾರೆ. ಅದರಲ್ಲಿ ಎಲ್ಲವೂ ನೈಜಲೈಫಿಗೆ ಹೊಂದುತ್ತಿರುವುದಿಲ್ಲ. ಆದರೂ ಓದಲೇಬೇಕು. ಅರ್ಥ ಮಾಡಿಕೊಂಡು, ನೆನಪಿನಲ್ಲಿಟ್ಟು ಕೊಂಡು ಬರೆದು ಅಂಕ ಗಳಿಸಬೇಕು. ನಮ್ಮದು ಎಷ್ಟೇ ಆದರೂ ಮೆಮೋರಿ ವೈಸ್ ಪರೀಕ್ಷಾ ಪದ್ಧತಿ.’
ಹಾಗಾದರೆ ಚಿಕ್ಕ ಮಕ್ಕಳನ್ನು ಓದಿಸುವುದು ಹೇಗೆ ?
ಬರೆಯುವುದು ಮಿತವಿರಲಿ :
ವಿವೇಕ್ ಮೂರನೇ ತರಗತಿಯ ವಿದ್ಯಾರ್ಥಿ. ಪ್ರಶ್ನೆ ಕೇಳಿದರೆ ಎಲ್ಲ ದಕ್ಕೂ ಥಟ್ ಎಂದು ಉತ್ತರ ಕೊಡು ತ್ತಾನೆ. ಆದರೆ ಪರೀಕ್ಷೆಯಲ್ಲಿ ಮಾತ್ರ ಏನೂ ಬರೆಯುವುದಿಲ್ಲ ಎಂಬುದು ಶಿಕ್ಷಕರ ದೂರು. ಮನೆಯಲ್ಲಿ ಚೆನ್ನಾಗಿ ಬರೆಸಬೇಕು ಎಂಬುದು ಶಿಕ್ಷಕರ ಸಲಹೆ. ಅವನ ಅಮ್ಮನಿಗಂತೂ ಸದಾ ಮಗನದೇ ಯೋಚನೆ. ‘ನನ್ ಮಗ ಮನೆಯಲ್ಲಿ ಎಲ್ಲದಕ್ಕೂ ಉತ್ತರ ಕೊಡ್ತಾನೆ. ಆದ್ರೆ , ಪರೀಕ್ಷೆಯಲ್ಲಿ ಯಾಕೆ ಬರೆಯುವುದಿಲ್ಲ. ಅದಕ್ಕೆ ಅಮ್ಮ ಹತ್ತು ಹತ್ತು ಬಾರಿ ಮಗನಿಂದ ಬರೆಸುತ್ತಾಳೆ. ಆಟವಾಡಲೂ ಬಿಡದೆ ಓದಲು ಕೂರಿಸುತ್ತಾಳೆ. ಮಗ ಉತ್ತರ ಹೇಳಿದರೆ ಅಮ್ಮನಿಗೆ ಸಮಾಧಾನವಿರು ವುದಿಲ್ಲ. ಬರೆದು ತೋರಿಸು ಎಂದು ಒತ್ತಾಯಿಸ ತ್ತಾಳೆ. ಇದು ವಿವೇಕ್‌ಗೆ ಚಿತ್ರಹಿಂಸೆ ಅನ್ನಿಸುತ್ತಿದೆ.
ಪರೀಕ್ಷೆ ಹತ್ತಿರ ಬಂತು. ಅಂದರೆ ಪೋಷಕರು ಯುದ್ಧ ಸನ್ನದ್ಧರಾ ಗುತ್ತಾರೆ. ಮಕ್ಕಳಿಗೆ ಅರ್ಥ ಮಾಡಿ ಸಲು ಜಗತ್ತಿನಲ್ಲಿ ಸಿಗುವ ಎಲ್ಲ ವಿಧಾನ ಗಳನ್ನು ಬಳಸತೊಡಗುತ್ತಾರೆ. ಅದರಲ್ಲಿ ಅತ್ಯಂತ ಜನಪ್ರಿಯ ವಿಧಾನ ಎಂದರೆ ಬರೆಸುವುದು ಹತ್ತತ್ತು ಸಲ ಬರೆಯಬೇಕು. ಹಾಗಾದ್ರೆ ನೆನಪಿನಲ್ಲಿ ಉಳಿಯುತ್ತೆ ಅನ್ನುತ್ತಾರೆ.
ತರಗತಿಯಲ್ಲಿ ಕೊಟ್ಟ ನೋಟ್ಸ್‌ನ್ನೇ ಯಥಾವತ್ ಬರೆಸುತ್ತಾರೆ. ಅದನ್ನು ಮಗು ಬೇರೆ ವಿಧಾನದಲ್ಲಿ ಬೇರೆ ಪದ ಬಳಸಿ ಹೇಳುತ್ತೇನೆ ಎಂದರೂ ಬಿಡುವುದಿಲ್ಲ. ‘ನೀವೇನಾದರೂ ನಿಮ್ಮ ಮಗುವಿಗೆ ಹೀಗೆ ಮಾಡ್ತಾ ಇದ್ದರೆ ದಯವಿಟ್ಟು ಗಮನಿಸಿ’.ಎಲ್‌ಎಸ್‌ಆರ್‌ಡಬ್ಲ್ಯು ಸ್ಕೂಲ್ ಅಂತ ಇದೆ. ಲಿಸನಿಂಗ್, ಸ್ಪೀಕಿಂಗ್, ರೀಡಿಂಗ್ ಹಾಗೂ ರೈಟಿಂಗ್ ಇದರ ಪ್ರಕಾರ ಮಗು ನೋಡಲು ಹೇಳಿದ್ದನ್ನು ಕೇಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆಮೇಲೆ ಮಾತನಾಡುವ ಹಾಗೂ ಓದುವ ಜೊತೆಗೆ ಬರೆಯಲು ಪ್ರಯ ತ್ನಿಸುತ್ತದೆ. ಈ ಕೌಶಲ್ಯವು ಪ್ರತಿಯೊಬ್ಬ ಸಾಮಾನ್ಯ ಮಗುವಿನಲ್ಲೂ ಇರುತ್ತದೆ.
ಆದರೆ ಪ್ರತಿಯೊಂದು ಮಗುವಿನ ಸಾಮರ್ಥ್ಯ ಬೇರೆ ಬೇರೆ ಇರುತ್ತದೆ. ಏಕೆಂದರೆ ಪ್ರತಿಯೊಂದು ಮಗುವು ಭಿನ್ನ ! ಒಂದೊಂದು ಮಗು ಬೇಗ ಬರೆಯಲು ಕಲಿತರೆ, ಇನ್ನೊಂದು ಮಗು ನಿಧಾನ ಪ್ರವೃತ್ತಿ ಹೊಂದಿರು ತ್ತದೆ. ಹಾಗಂತ ಬರೆಯಲು ಬರುವ ಮಗು ಜಾಣ. ಇನ್ನೊಂದು ಮಗು ದಡ್ಡ ಎಂದು ಹೀಯಾಳಿಸಬಾರದು. ಇದು ಮಗುವಿನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುವ ಮೂಲಕ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಮಗು ಶಾಶ್ವತವಾಗಿ ಹಿನ್ನಡೆಗೆ ಸರಿಯುವ ಅಪಾಯವಿರ‍್ತುದೆ.
ಪ್ರಾಕ್ಟಿಕಲ್ ಆಗಿ ತೋರಿಸಿ :
ಇಂದಿನ ಶಿಕ್ಷಣ ಪದ್ಧತಿಯಲ್ಲಿ ಬರ ವಣಿಗೆಯೇ ಮಾನದಂಡ, ಪರೀಕ್ಷೆ ಯಲ್ಲಿ ಕೇಳಿದ ಪ್ರಶ್ನೆಗೆ ಸರಿಯಾಗಿ ಬರೆದು ಅಂಕ ಗಳಿಸಿದರೆ ಮಾತ್ರ ಆ ವಿದ್ಯಾರ್ಥಿಯು ವ್ಯವಸ್ಥೆಯಲ್ಲಿ ಫಿಟ್ ಆಗುತ್ತದೆ ಎಂಬುದು ಬಹುತೇಕರ ವಾದ. ಹೀಗಾಗಿ ಬರೆಯುವುದೇ ಮಗುವಿನ ಬುದ್ಧಿಶಕ್ತಿಯ ಮೌಲ್ಯ ಮಾಪನವಾಗುತ್ತಿದೆ. ಆದರೆ ಹೆಚ್ಚು ಜನರಿಗೆ ವ್ಯವಸ್ಥೆಯ ಲೋಪ ಗೊತ್ತಿರುವುದಿಲ್ಲ.
ಉದಾ : ೪ನೇ ಕ್ಲಾಸಿನ ರೂಪ ಚುರುಕಾದ ಹುಡುಗಿ. ಕಾರ್ಟೂನ್ ನೋಡಿಯ ಹಿಂದಿ ಕಲಿತಿದ್ದಾಳೆ. ಮೊಬೈಲ್ ಆಪ್‌ಗಳು, ಕಂಪ್ಯೂಟರ್ ಸೆಟಿಂಗ್ ಗಳು ಅವಳಿಗೆ ಕರಗತ. ಕಂಪ್ಯೂಟರ್ ನಲ್ಲಿರುವ ವಿಧಾನವನ್ನು ನೀರು ಕುಡಿದಷ್ಟು ಸುಲಭವಾಗಿ ಕಲಿತಿ ದ್ದಾಳೆ. ಆದರೆ ಪರಿಸರ ವಿeನದಲ್ಲಿ ಮಾತ್ರ ಕಡಿಮೆ ಅಂಕ ಬರುತ್ತಿದೆ ಎಂಬುದು ಪೋಷಕರ ಕೊರಗು.
ಇಲ್ಲಿ ರೂಪಳಿಗೆ ಪ್ಲಾಂಟ್‌ಲೈಫ್ ಸೈಕಲ್‌ನ್ನು ಸರಳ ವಿಧಾನದಲ್ಲಿ ಹೇಗೆ ಅರ್ಥ ಮಾಡಿಸಬಹುದು ?
ಮಗುವಿಗೆ ಬರೆದು ಅರ್ಥ ಮಾಡಿ ಕೊಳ್ಳುವುದಕ್ಕಿಂತ ವಿಷುಯಲ್ ಪವರ್ ಹೆಚ್ಚಿರುತ್ತದೆ. ಹೀಗಾಗಿ ಅದು ನೋಡಿ ಕಲಿ ಯುತ್ತದೆ. ಲೈಫ್ ಸೈಕಲ್ ಕುರಿತು ಪಾಠ ಮಾಡುವಾಗ ಹೆಚ್ಚಿನ ಶಿಕ್ಷಕರು ಚಿತ್ರ ಬರೆದು ವಿವರಿಸಿ ಬಿಡುತ್ತಾರೆ.
ಬೀಜ ಮಣ್ಣಿಗೆ ಬಿದ್ದು, ಮೊಳಕೆ ಯೊಡೆದು, ಗಿಡವಾಗಿ ,ಮರವಾಗಿ ಬೀಜಬಿಟ್ಟು ಮತ್ತೆ ಮೊಳಕೆಯೊಡೆ ಯುವುದು ಮಕ್ಕಳಿಗೆ ಅರ್ಥವಾಗು ವುದಿಲ್ಲ. ಪೋಷಕರು ನೋಟ್ಸ್ ಹಿಡಿದು ಹತ್ತಾರು ಬಾರಿ ಬರೆಸುವ ಮೂಲಕ ಬಾಯಿ ಪಾಠ ಮಾಡಿಸುತ್ತಾರೆ. ಆಗ ಮಗುವಿಗೆ ಸಹಜವಾಗಿ ಕಲಿಕೆಯ ಸಂತೋಷ ಹೊರಟು ಹೋಗುತ್ತದೆ. ಅದರ ಬದಲು ಮನೆಯಲ್ಲಿ ಕಾಳು ನೆನೆಸಿ ಅದನ್ನು ಮೊಳಕೆ ಬರಿಸಿ, ಮಕ್ಕಳ ಕೈಯಿಂದಲೇ ಮಣ್ಣಿಗೆ ಹಾಕಿಸಿದರೆ ಗಿಡ ಬೆಳೆ ಯುವ ಪದ್ಧತಿ ಮಕ್ಕಳಿಗೆ ಸುಲಭ ವಾಗಿ ಅರ್ಥವಾಗುತದೆ. ಆಗ ಸುಲಭವಾಗಿ ನೆನಪಿಟ್ಟು ಕೊಳ್ಳುತ್ತಾರೆ. ಆದರೆ ಯಾಂತ್ರಿಕ ಯುಗದಲ್ಲಿ ಬದುಕುತ್ತಿರುವ ಪೋಷಕರಿಗೆ ಅಷ್ಟೊಂದು ವ್ಯವ ಧಾನ, ವಿವೇಚನೆ ಇರಬೇಕಲ್ವೆ ?