ತೊಗರ್ಸಿ: ಶಿಕಾರಿಪುರ ತಾಲೂಕು ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಬೆಳ್ಳಿ ಆಭರಣಗಳನ್ನು ಮುಜರಾಯಿ ಇಲಾಖೆಗೆ ಪಡೆಯುವ ಸಭೆಯು ಜುಲೈ ೧೯ ರಂದು ನಡೆಯಿತು.ಮಳೆ ಹಿರೇಮಠದ ಶ್ರೀ ಮಹಾಂತದೇಶಿಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿ ಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶಿಕಾರಿಪುರ ತಾಲೂಕು ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಅವರ ಅಧ್ಯಕ್ಷತೆಯೊಂದಿಗೆ ಸಮಿತಿಯ ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ನೆರವೇರಿತು.
ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಮಾತನಾಡಿ, ಭಕ್ತರು ನೀಡಿದ ಆಭರಣಗಳನ್ನು ಸಮಿತಿಯವರು ವ್ಯವಸ್ಥಿತವಾಗಿ ರಕ್ಷಣೆ ಮಾಡಿದ್ದಾರೆ, ಇವುಗಳ ರಕ್ಷಣೆಗಾಗಿ ತಾಲೂಕು ಟ್ರಜುರಿಯಲ್ಲಿ ಸುರಕ್ಷಿತವಾಗಿಡಲು ಸಮಿತಿಯವರ ಮತ್ತು ಸಾರ್ವಜನಿಕರ ಮನವಿ ಮೇರೆಗೆ ಪಟ್ಟಿ ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.ದೇವಾಲಯದ ಉತ್ಸವ ಹಾಗೂ ವಿಶೇಷ ಸಂದರ್ಭಗಳಲ್ಲಿ ಇವುಗಳನ್ನು ಕೊಡಲಾಗುವುದು, ಆನಂತರ ಪುನಃ ಟ್ರಜುರಿಗೆ ಒಪ್ಪಿಸಬೇಕೆಂದರು. ನಿತ್ಯ ಉಪಯೋಗಿಸುವ ವಸ್ತುಗಳನ್ನು ಸಮಿತಿಯವರಿಗೆ ಒಪ್ಪಿಸಿದರು. ಸಮಿತಿ ಹಾಗೂ ಇಲಾಖೆ ಜಂಟಿಯಾಗಿ ಕೆಲಸ ನಿರ್ವಹಿಸಲಾಗುತ್ತದೆ ಎಂದರು .
ಶಿರಸ್ತೇದಾರ್ ವಿನಯ್ ಆರಾಧ್ಯ, ಉಪ ತಹಸಿಲ್ದಾರ್ ಮಹೇಶ್, ಕಂದಾಯ ನಿರೀಕ್ಷಕ ಮೇಘರಾಜ್, ಮುಜರಾಯಿ ಅಧಿಕಾರಿ ಬಸಮ್ಮ, ಗ್ರಾಮ ಲೆಕ್ಕಾಧಿಕಾರಿ ರೂಪ, ಮತ್ತಿತರ ಅಧಿಕಾರಿಗಳು ಆಭರಣಗಳ ಪಟ್ಟಿ ಮಾಡಲು ಸಹಕರಿಸಿದರು.ದೇವಾಲಯ ಸಮಿತಿ ಸದಸ್ಯರಾದ ಜೆ ಪರಮೇಶ್ವರಪ್ಪ, ಎಸ್ ಎನ್ ಜನ್ನು, ಪುನೀತ್ ಗೌಳಿ, ಅರ್ಚಕ ಮಂಜಪ್ಪ, ಜಯಮ್ಮ ಕೋಂ ಸುಭಾಷ್, ಪಾರ್ವತಮ್ಮ ಕೋಂ ವೀರಪ್ಪಯ್ಯ, ಬಸವರಾಜಪ್ಪ ಚಲವಾದಿ, ಮುಖಂಡರಾದ ಕೆ ರೇವಣಪ್ಪ, ಸಣ್ಣ ಹನುಮಂತಪ್ಪ, ಎಂ ಎನ್ ಗೌಳಿ, ಗ್ರಾ ಪಂ ಅಧ್ಯಕ್ಷ ನಿರಂಜನ್, ಚನ್ನವೀರ ಸ್ವಾಮಿ, ಪಿಡಿಒ ನಾಗರಾಜ್ ಹಾಜರಿದ್ದು ದೇವಾಲಯ ಅಭಿವೃದ್ಧಿ ಬಗ್ಗೆ ಹಲವಾರು ಸಲಹೆಗಳನ್ನು ನೀಡಿದರು.ಆನಂತರ ಸಮಿತಿಯವರು ಅಧಿಕಾರಿಗಳನ್ನು ಸನ್ಮಾನಿಸಿದರು.