Saturday, October 12, 2024
Google search engine
Homeಅಂಕಣಗಳುತಾಯ್ನುಡಿಯ ನೈಜ ಅರ್ಥವೇನು?

ತಾಯ್ನುಡಿಯ ನೈಜ ಅರ್ಥವೇನು?

ಲೇಖನ: ಬಿ.ನಾಗರಾಜ್

ತಾಯ್ನುಡಿಯ ನೈಜ ಅರ್ಥವೇನು?

ಗತ್ತಿನಲ್ಲಿ ವರ್ಷದ ೩೬೫ ದಿನವೂ ಒಂದಿಲ್ಲೊಂದು ಆಚರಣೆಗೆ ಮೀಸಲಾಗಿರುತ್ತದೆ. ಅಂತೆಯೇ ಇಂದು ವಿಶ್ವ ತಾಯ್ನುಡಿ ದಿನ. ಪ್ರತಿಯೊಬ್ಬರೂ ತಮ್ಮದೇ ಆದ ತಾಯಿ ಭಾಷೆಯನ್ನು ಸಂಭ್ರಮದಿಂದ ಆಚರಿಸುವ ದಿನ.ತಾಯ್ನುಡಿ ದಿನ ಆಚರಿಸುವ ಮೂಲ ಉದ್ದೇಶ ಭಾಷಿಕ- ಸಾಂಸ್ಕೃತಿಕ ಬಹುಳತೆ ಮತ್ತು ಬಹುಭಾಷಿಕತೆಯನ್ನು ಪೋಷಿಸುವು ದಾಗಿದೆ. ಇಂತಹ ಮಹತ್ತರ ಆಶಯದೊಂದಿಗೆ ಯುನೆಸ್ಕೋ ಸಂಸ್ಥೆ ಈ ದಿನಾಚರಣೆಯನ್ನು ಅನುಷ್ಠಾನಕ್ಕೆ ತಂದಿದೆ.

ಯುನೆಸ್ಕೋ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರತಿ ವರ್ಷ ಈ ದಿನವನ್ನು ಅಂತರಾಷ್ಟ್ರೀಯ ತಾಯ್ನುಡಿ ದಿನವಾಗಿ ಆಚರಿಸುತ್ತಾ ಬರುತ್ತಿವೆ. ಮಾನವ ಕುಲದ ಮೂರ್ತ ಮತ್ತು ಅಮೂರ್ತ ರೂಪಗಳನ್ನು ಪರಿಭಾವಿಸುವ ಹಾಗೂ ಪರಂಪರೆಯ ಮಹತ್ವವನ್ನು ಪ್ರತಿನಿಧಿಸುವ ಬಗೆಯಾಗಿ ಭಾಷೆಗಳನ್ನು ಯುನೆಸ್ಕೋ ವ್ಯಾಖ್ಯಾನಿಸಿದೆ.
ತಾಯ್ನುಡಿಗಳ ಮೂಲಕ ದೇಸೀ ಸಮೂಹಗಳ ವಿವೇಕವನ್ನು ಪ್ರೋತ್ಸಾಹಿಸುವ ನೆಲೆಯೂ ಇದಾಗಿದ್ದು, ಈ ಆಚರಣೆಯು ಕೇವಲ ಭಾಷಿಕ ವೈವಿದ್ಯತೆ ಮತ್ತು ಬಹು ಭಾಷೆಗಳ ಮೂಲಕ ಶಿಕ್ಷಣ ಪಡೆಯುವ ಬಗೆ ಮಾತ್ರವಲ್ಲ. ಒಂದು ಪಾರಂಪರಿಕವಾಗಿ ರೂಢಿಸಿಕೊಂಡು ಬಂದಿರುವ ಭಾಷಿಕ- ಸಾಂಸ್ಕೃತಿಕ ಇಡೀ ಅನುಭವ. ಅನನ್ಯತೆ ಹಾಗೂ ತಿಳುವಳಿಕಯ ಅರಿವನ್ನು ಮೂಡಿಸುವ ಉದ್ದೇಶ ಹೊಂದಿದೆ.

೧೯೬೦ರ ಜನಗಣತಿ ಪ್ರಕಾರ ಭಾರತದಲ್ಲಿ ೧೬೫೬ ಭಾಷೆಗಳಿವೆ. ಹಾಗೆಯೇ ೬೭೦೦ ಭಾಷೆಗಳು ಇಂದು ಜಗತ್ತಿನಾದ್ಯಂತ ಬಳಕೆಯಲ್ಲಿದ್ದು, ಅರ್ಧಕ್ಕಿಂತ ಹೆಚ್ಚು ಭಾಷೆಗಳು ಬುಡಕಟ್ಟು ಮತ್ತು ಅಲ್ಪಸಂಖ್ಯಾತರ ಸಮುದಾಯಗಳಿಗೆ ಸೇರಿವೆ. ಬಹುಸಂಖ್ಯಾತ /ಪ್ರಾದೇಶಿಕ/ ರಾಷ್ಟ್ರ ಎಂದೆಲ್ಲ ಮಾನ್ಯತೆ ಪಡೆದಿರುವ ಭಾಷೆಗಳ ಪ್ರಾಬಲ್ಯದಿಂದಾಗಿ ಈ ಭಾಷೆಗಳಲ್ಲಿ ಹಲವು ಅವಸಾನ ಹೊಂದಿವೆ. ಮತ್ತೆ ಹಲವು ಭಾಷೆಗಳು ಅವಸಾನದ ಸ್ಥಿತಿಗೆ ತಲುಪಿವೆ.

ಸಮುದಾಯದ ಆರ್ಥಿಕ, ಸಾಮಾಜಿಕ, ರಾಜಕೀಯ ಆಶೋತ್ತರಗಳನ್ನು ಕಾಪಾಡುವ ಜವಾಬ್ದಾರಿಯನ್ನು ಭಾಷೆಗಳು ನಿಭಾಯಿಸುತ್ತವೆ. ಈ ಹಕ್ಕುಗಳು ಕೆಲವು ಸಮುದಾಯಗಳಿಗೆ ಮಾತ್ರ ಲಭಿಸಿವೆ ಎನ್ನುವುದು ದುರಂತದ ಸಂಗತಿ. ತಮ್ಮ ತಾಯ್ನುಡಿಯನ್ನು ಕಾಪಾಡುವ ಸಾಂವಿಧಾನಿಕ ಹಕ್ಕು ಎಲ್ಲರಿಗೂ ಇದೆ.

ಯುನೆಸ್ಕೋದಂತಹ ಸಂಸ್ಥೆಗಳು ಭಾಷಿಕ, ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಮೆರೆಯುವ ತಾತ್ವಿಕತೆಯನ್ನು ಪ್ರದರ್ಶಿಸಿರುವುದು ನಿಜ. ಆದರೆ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಮೌಲ್ಯಗಳನ್ನು ಕಾಪಾಡುವ ನಮ್ಮ ಪ್ರಭುತ್ವಗಳು ರೂಪಿಸುವ ಇಬ್ಬಂದಿ ಭಾಷಾ ನೀತಿಯಿಂದಾಗಿ ಎಷ್ಟೋ ಸಮುದಾಯಗಳಿಗೆ ತಮ್ಮ ಭಾಷಿಕ , ಸಾಂಸ್ಕೃತಿಕ ಹಕ್ಕನ್ನೇ ಇಲ್ಲವಾಗಿಸುವ ಹುನ್ನಾರಗಳು ನಡೆಯುತ್ತಿವೆ.
ಪರಿಣಾಮವಾಗಿ ‘ಇಂಗ್ಲೀಷ್ ಮಾತ್ರ’ ‘ಕನ್ನಡ ಕಡ್ಡಾಯ’ ಎನ್ನುವ ಶಾಸನಬದ್ಧ ನಿರ್ಧಾರಗಳು ಕಾರ್ಯರೂಪಕ್ಕೆ ಬರಲು ಸಾಧ್ಯವಾಗುತ್ತದೆ. ಹಾಗಾದರೆ ಬಹು ಸಾಂಸ್ಕೃತಿಕ ಹಾಗೂ ಬಹುಭಾಷಿಕ ಪ್ರeಯನ್ನು ಕಾಪಾಡುವ ಹೊಣೆ ಯಾರದು? ಈ ಸಮುದಾಯಗಳ ಅಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ಯಾರದು ? ಈ ಪ್ರಶ್ನೆಗಳಿಗೆಲ್ಲ ಉತ್ತರಿಸುವವರು ಯಾರು ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಇಚ್ಛಾಶಕ್ತಿ ನಮ್ಮ ಪ್ರಭುತ್ವಗಳಿಗೆ ಇಲ್ಲ. ಉತ್ತರ ದೊರೆಯದೆ ನಮ್ಮ ರಾಷ್ಟ್ರೀಯತೆಯ (ಘೆZಠಿಜಿಟ್ಞ್ಝಜಿಠಿqs ಜಿo ಠಿeಛಿ ಛಿಛ್ಝಿಜ್ಞಿಜ ಟ್ಛ ಟ್ಞಛ್ಞಿಛಿoo) ಕಲ್ಪನೆ ಸಾಕಾರಗೊಳ್ಳುವುದಿಲ್ಲ.

RELATED ARTICLES
- Advertisment -
Google search engine

Most Popular

Recent Comments