ಕೊಳವೆ ಬಾವಿ ಹಣ ಪೋಲು ಮಾಡಿದರೆ ಕ್ರಮ : ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿ ವಿಫಲವಾಗಿದ್ದರೂ ಅದಕ್ಕೆ ಪೈಪ್‌ಲೈನ್, ವಿದ್ಯುತ್ ಸಂಪರ್ಕ ಪಡೆದಿ ರುವ ಬಗ್ಗೆ ವರದಿ ನೀಡಿ ಹಣ ಪೋಲು ಮಾಡಿದ ಪ್ರಕರಣಗಳ ಪಟ್ಟಿ ಮಾಡಿ ಸಂಬಂ ಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊಳವೆ ಬಾವಿಗಳ ಕೊರೆಯುವುದರಲ್ಲಿ ಆಗಿರುವ ಲೋಪಗಳ ಬಗ್ಗೆ ನಡೆದ ಚರ್ಚೆ ಸಂದರ್ಭ ದಲ್ಲಿ ಸೂಚನೆ ನೀಡಿದರು.
ಗ್ರಾಮೀಣ ಭಾಗದ ಕೆಲವೆಡೆ ಕೊಳವೆ ಬಾವಿ ತೋಡುವುದಕ್ಕೆ ಮುನ್ನಾ ಪೈಪ್ ಲೈನ್, ವಿದ್ಯುತ್ ಸಂಪರ್ಕ ಪಡೆದು ನಂತರ ಕೊಳವೆ ಬಾವಿ ತೋಡಿ ಅದು ವಿಫಲವಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಇದರಿಂದ ಯಾರಿಗೆ ನಷ್ಟ, ಮೊದಲು ನೀರು ಲಭ್ಯತೆ ನೋಡಿಕೊಂಡು ನಂತರ ಪೈಪ್ ಲೈನ್, ವಿದ್ಯುತ್ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಸಭೆಯ ಗಮನಕ್ಕೆ ತಂದರು.
ಈ ಬಗ್ಗೆ ಚರ್ಚಿಸಿದ ಸಚಿವರು, ಇನ್ನು ಮುಂದೆ ಕೊಳವೆ ಬಾವಿಯಲ್ಲಿ ನೀರು ಬಂದ ನಂತರವೇ ಪೈಪ್‌ಲೈನ್ ಹಾಕಲು ಕ್ರಮ ಕೈಗೊಳ್ಳಿ, ಯಾವುದೇ ಕಾರಣಕ್ಕೂ ಹಣದ ದುರ್ಬಳಕೆ ಯಾಗಬಾರದು.
ಎಲ್ಲಿ ಕೊಳವೆ ಬಾವಿ ವಿಫಲವಾಗಿ ಕುಡಿ ಯುವ ನೀರಿನ ಸಮಸ್ಯೆ ಹೆಚ್ಚಾಗಿದೆಯೋ ಅಲ್ಲೇಲ್ಲ ಟ್ಯಾಂಕರ್ ಮೂಲಕ ಕುಡಿಯುವ ನೀರು ವಿತರಣೆಗೆ ಕ್ರಮ ಕೈಗೊಳ್ಳಿ ಎಂದರು.
ಶುದ್ದ ನೀರಿನ ಘಟಕ: ಜಿಲ್ಲೆಗೆ ೬೧ ಶುದ್ಧ ಕುಡಿ ಯುವ ನೀರಿನ ಘಟಕಗಳು ಮಂಜೂರಾಗಿರುವ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಪೈಕಿ ೫೪ ಘಟಕU ಳಿಗೆ ಜಾಗ ಗುರುತಿಸಿರುವುದಾಗಿ ತಿಳಿಸಿದರು.
ನೀರಿನ ಘಟಕಗಳು ಸದ್ಭಳಕೆಯಾಗಬೇಕು, ಇದಕ್ಕೆ ಬೇಕಾದ ಜಾಗ, ಕೊಳವೆ ಬಾವಿ ಇತ್ಯಾದಿ ಸೌಲಭ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿಕೊಡುವಂತೆ ಸಚಿವರು ತಿಳಿಸಿದರು.
ಶಿವಮೊಗ್ಗ ನಗರಕ್ಕೆ ೨೪ ಗಂಟೆ ಕುಡಿಯುವ ನೀರು ನೀಡುವ ಯೋಜನೆ ಪ್ರಗತಿಯಲ್ಲಿದ್ದು ೪೪ಕೋಟಿರೂ. ಯೋಜನೆಯಲ್ಲಿ ಈಗಾಗಲೇ ೨೮ಕೋಟಿ ಖರ್ಚು ಮಾಡಿ ಗಾಜನೂರು ಡ್ಯಾಂನಿಂದ ಪ್ರತ್ಯೇಕ ಪೈಪ್‌ಲೈನ್ ಮೂಲಕ ನಗರಕ್ಕೆ ನೀರು ತರಲಾಗಿದೆ ಹಾಗೂ ಅಮೃತ್ ಯೋಜನೆಯಡಿ ೪೨ ಕೋಟಿರೂ.ಗಳಲ್ಲಿ ೧೧ ನೀರಿನ ಟ್ಯಾಂಕ್‌ಗಳನ್ನು ನಗರದ ವಿವಿಧೆಡೆ ನಿರ್ಮಿಸಲು ಉದ್ದೇಶಿಸಿದ್ದು, ಈ ಪೈಕಿ ೮ ಟ್ಯಾಂಕ್‌ಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಮಳೆ ಕೊರತೆ: ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ ಅಂತ್ಯದವರೆಗೆ ೧೮೫೬ ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು, ಆದರೆ ೧೩೬೮ ಮಿ.ಮೀ, ಮಳೆಯಾಗಿದೆ. ಒಟ್ಟು ಶೇ.೨೬ ರಷ್ಟು ಮಳೆ ಕೊರತೆ ಎದುರಾಗಿದೆ.
ಮೆಕ್ಕೆಜೋಳ ಬಿತ್ತನೆ ಹೆಚ್ಚಳ: ಈ ಬಾರಿ ೧.೬೪ಲಕ್ಷ ಹೆ. ಬಿತ್ತನೆ ಗುರಿ ಹೊಂದಿತ್ತಾದರೂ ಮಳೆ ಕೊರತೆಯಿಂದಾಗಿ ಕೇವಲ ೧.೪೪ಲಕ್ಷ ಹೆ. ಬಿತ್ತನೆಯಾಗಿದೆ. ೧.೭.ಲಕ್ಷ ಹೆ. ಭತ್ತದ ಬಿತ್ತನೆ ಬದಲು ೭೦ ಸಾವಿರ ಹೆ. ಬಿತ್ತನೆಯಾ ಗಿದೆ ಎಂದರು.
ಸರ್ಕಾ ರದ ಕೆರೆ ಸಂಜೀವಿನಿ ಯೋಜನೆ ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರು.
ಮಧ್ಯಾಹ್ನದ ನಂತರವೂ ಸಭೆ ಮುಂದು ವರೆದಿತ್ತು. ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಲಾಯಿತು.
ಜಿ.ಪಂ. ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾಧಿಕಾರಿ ಡಾ. ಲೋಕೇಶ್, ಜಿ.ಪಂ. ಸಿಇಓ ರಾಕೇಶ್‌ಕುಮಾರ್ ಉಪಸ್ಥಿತರಿದ್ದರು.