ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಎಲ್ಲಿಂದ ತರುತ್ತಾರೆ?:ಹೆಚ್‌ಡಿಕೆ

ಶಿವಮೊಗ್ಗ : ರಾಜ್ಯದಲ್ಲಿ ನಾಲ್ಕುವರೆ ವರ್ಷ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕೆಲಸಗಳನ್ನು ಮಾಡದ ಸಿದ್ದರಾಮಯ್ಯನವರು ಈಗ ಎಲ್ಲಾ ಜಿಲ್ಲೆಗಳಲ್ಲಿ ನೂರಾರು ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಹೇಳುತ್ತಿಲ್ಲಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಇಂದು ತಾಲೂಕಿನ ಬುಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ೯೦ಲಕ್ಷ ಕೋಟಿ ಸಾಲ ಮಾಡಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್‌ನವರು ಈಗ ೧ಕಾಲು ಲಕ್ಷಕೋಟಿ ರೂ. ಸಾಲ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಪಕ್ಷದ ನಾಯ ಕರೇ ಕಿತ್ತಾಡಿಕೊಂಡು ಉತ್ತಮ ಆಡಳಿತ ನೀಡಲು ವಿಫಲರಾ ದರು. ಇದನ್ನು ಯಡಿಯೂರಪ್ಪನವರೇ ಒಪ್ಪಿಕೊಳ್ಳುತ್ತಾರೆ, ತಾವು ಇಂತಹ ತಪ್ಪನ್ನು ಮುಂದೆ ಮಾಡುವುದಿಲ್ಲ ಎನ್ನುತ್ತಿದ್ದಾರೆ, ಆದರೆ ಇದನ್ನು ನಂಬುವುದು ಹೇಗೆ ಎಂದರು.
ಜೆಡಿಎಸ್ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿದೆ, ರೈತರ ಸಾಲಮನ್ನಾ, ವೈeನಿಕ ಬೆಲೆ ನೀಡುವುದಕ್ಕೆ ಒತ್ತು ನೀಡಲಾಗು ವುದು. ಅಲ್ಲದೆ ರೈತರಿಗೆ ಸೇರಿದಂತೆ ರಾಜ್ಯದ ಎಲ್ಲರಿಗೂ ೨೪ ಗಂಟೆ ವಿದ್ಯುತ್ ನೀಡಲು ಜೆಡಿಎಸ್ ಅಧಿಕಾರಕ್ಕೆ ಬಂದ ೨ ತಿಂಗಳಲ್ಲಿ ಮಾಡಲು ಬದ್ಧವಾಗಿರುವುದಾಗಿ ಘೋಷಿಸಿದರು.
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗವುದಿಲ್ಲ, ಕಿಂಗ್ ಆಗಲಿದೆ. ೧೧೩ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ನಮಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಜೆಡಿಎಸ್ ಗೆಲ್ಲಲಿದೆ, ಉತ್ತರ ಕರ್ನಾಟಕದ ಕಡೆ ಪ್ರಚಾರದಲ್ಲಿ ಹೆಚ್ಚಿನ ಗಮನ ನೀಡಲಾಗುವುದು ಎಂದರು.
ಚಾಮುಂಡೇಶ್ವರಿ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದೇನೆ, ಉತ್ತರ ಕರ್ನಾಟಕದ ೫೦ ಕ್ಷೇತ್ರಗಳನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡು ಗ್ರಾಮವಾಸ್ಥವ್ಯ ಮಾಡಿ, ಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಲಾಗಿದೆ. ೨೦ ತಿಂಗಳು ಯಾವುದೇ ಹಗರಣ ಇಲ್ಲದೆ ಸ್ವಚ್ಛ ಆಡಳಿತ ನೀಡಿದ್ದೇನೆ. ಜನರಿಗೆ ಈ ಬಗ್ಗೆ ನಂಬಿಕೆ ಇದೆ, ಮುಂದೆ ಅಧಿಕಾರಕ್ಕೆ ಬಂದಾಗ ಅದನ್ನು ಉಳಿಸಿಕೊಳ್ಳುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೈತರ ಸಾಲಮನ್ನಾ ಘೋಷಣೆ ಡೋಂಗಿ ಯಾಗಿದ್ದು, ಇದಕ್ಕೆ ಬೇಕಾದ ಹಣ ಮೀಸಲಿ ಡದೆ ಬರೀ ಘೋಷಣೆ ಮಾಡಿದ್ದಾರೆ ಎಂದು ಟೀಕಿಸಿದ ಅವರು, ಮುಂದಿನ ಸರ್ಕಾರಕ್ಕೆ ಈ ಸಾಲದ ಹೊರ ಹೊರೆಸಿ ಹೋಗುವ ಲೆಕ್ಕಾಚಾರ ದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಮುಂದಿನ ತಾತ್ಕಾಲಿಕ ಬಜೆಟ್‌ನಲ್ಲೂ ಈ ಹಣ ಮೀಸಲಿ ಡುವುದು ಕಷ್ಟ, ಸಹಕಾರಿ ಬ್ಯಾಂಕ್‌ಗಳಿಗೆ ಮೊದಲು ನೀವು ಕ್ಲೈಮ್ ಮಾಡಿ ಎನ್ನುವ ಮೂಲಕ ಮುಖ್ಯಮಂತ್ರಿಗಳು ಸಾಲದ ಹಣ ಪಾವತಿಸುವ ಗೋಜಿನಿಂದ ವಿಮುಖರಾಗುತ್ತಿದ್ದಾರೆ ಎಂದು ದೂರಿದರು.
ಬರಗಾಲ, ಕೀಟ ಭಾದೆ ಹಾಗೂ ವೈeನಿಕ ಬೆಲೆ ಇಲ್ಲದೆ ತತ್ತರಿಸಿರುವ ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸವನ್ನು ಎರಡೂ ಸರ್ಕಾರಗಳು ಮಾಡುತ್ತಿಲ್ಲ . ಎರಡೂ ಪಕ್ಷಗಳ ನಾಯಕರು ಜನಪರ ಕೆಲಸಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಬರೀ ಒಬ್ಬರು ಮತ್ತೊಬ್ಬರಿಗೆ ಬಯ್ಯುವದನ್ನೇ ಕೆಲಸಾಗಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಮಧುಬಂಗಾರಪ್ಪ, ಶಾರದಾಪೂರ‍್ಯನಾಯ್ಕ, ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ಶ್ರೀಕಾಂತ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ನಿರಂಜನ್, ಜಿ.ಡಿ.ಮಂಜು ನಾಥ್, ಟಿ.ಬಿ.ಜಗದೀಶ್, ಕಾಂತರಾಜ್ ಮತ್ತಿತರರಿದ್ದರು.