Sunday, November 10, 2024
Google search engine
Homeಇ-ಪತ್ರಿಕೆಕುಟುಂಬದವರ ಕಾಳಜಿ ಜೊತೆ ತಮ್ಮ ಆರೋಗ್ಯದ ಕಡೆ ಗಮನ ಕೊಡಿ

ಕುಟುಂಬದವರ ಕಾಳಜಿ ಜೊತೆ ತಮ್ಮ ಆರೋಗ್ಯದ ಕಡೆ ಗಮನ ಕೊಡಿ

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೋಕ್ಷಾ ರುದ್ರಸ್ವಾಮಿ ಕರೆ

ಚಿತ್ರದುರ್ಗ: ಮಹಿಳೆಯರು ಮನೆ, ಮಕ್ಕಳು, ಗಂಡ ಎಂದು ಅವರ ಬಗ್ಗೆ ಕಾಳಜಿಯನ್ನು ಮಾಡುವುದರ ಮೂಲಕ ತನ್ನ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವುದಿಲ್ಲ, ೪೦ ವರ್ಷ ದಾಟಿದ ನಂತರ ತಮ್ಮ ಆರೋಗ್ಯದ ಬಗ್ಗೆಯೂ ಸಹಾ ಕಾಳಜಿಯನ್ನು ವಹಿಸಬೇಕಿದೆ ಎಂದು ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷರು, ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷರಾದ ಮೋಕ್ಷಾ ರುದ್ರಸ್ವಾಮಿ ಕರೆ ನೀಡಿದರು.

ವೀರಶೈವ ಸಮಾಜ, ಇನ್ನರ್ ವೀಲ್ ಕ್ಲಬ್, ಮಹಿಳಾ ಸೇವಾ ಸಮಾಜ ಹಾಗೂ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇವರ ಸಂಯುಕ್ತಾಶ್ರದಲ್ಲಿ ಚಿತ್ರದುರ್ಗ ನಗರದ ಮಹಿಳಾಮ ಸೇವಾ ಸಮಾಜದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ೪೦ ವರ್ಷ ದಾಟಿದ ನಂತರ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕಿದೆ, ಯಾವುದೇ ಕಾರಣಕ್ಕೂ ಸಹಾ ನಿರ್ಲಕ್ಷ ಮಾಡಬಾರದು. ವೈದ್ಯರ ಬಳಿ ಹೋಗಿ ತಪಾಸಣೆಯನ್ನು ಮಾಡಿಸುವುದರ ಮೂಲಕ ದೇಹದಲ್ಲಿ ಏನಾದರೂ ತೊಂದರೆಗಳಿದ್ದರೆ ಅದನ್ನು ಚಿಕ್ಕದಾಗಿ ಇದ್ದಾಗಲೇ ಗುರುತಿಸಿ ಚಿಕಿತ್ಸೆಯನ್ನು ಪಡೆಯುವುದರ ಮೂಲಕ ಗುಣಪಡಿಸಿಕೊಳ್ಳಬಹುದಾಗಿದೆ. ಮಾನವನಿಗೆ ಆರೋಗ್ಯವೇ ಬಾಗ್ಯವಾಗಿದೆ ಆರೋಗ್ಯ ಚನ್ನಾಗಿ ಇದ್ದರೆ ಬೇರೆ ಎಲ್ಲದನ್ನು ಸಹಾ ಪಡೆಯಬಹುದಾಗಿದೆ ಎಂದರು.

ನಗರದ ಬಸವೇಶ್ವರ ಆಸ್ಪತ್ರೆಯವರು ನೀಡುವ ಕಾರ್ಡನ್ನು ಪಡೆದರೆ ಅದರಿಂದ ಅಲ್ಲಿ ಚಿಕಿತ್ಸೆ ಪಡೆಯದವರಿಗೆ ಶೇ.೨೦ ರಷ್ಟು ರಿಯಾಯಿತಿಯನ್ನು ನೀಡಲು ಮುಂದಾಗಿದ್ದಾರೆ. ಈಗ ಬಸವೇಶ್ವರ ಆಸ್ಪತ್ರೆಯೂ ಸಹಾ ಉತ್ತಮವಾದ ಚಿಕಿತ್ಸೆಯನ್ನು ನೀಡುತ್ತಿದೆ. ಅಲ್ಲಿಯೂ ಸಹಾ ಉತ್ತಮವಾದ ವೈದ್ಯರುಗಳಿದ್ದಾರೆ. ಇದರ ಸದುಪಯೋಗವನ್ನು ಪಡೆಯುವಂತೆ ಮನವಿ ಮಾಡಿದರು.

ವೀರಶೈವ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ, ಹಣವನ್ನು ಎಷ್ಟಾದರೂ ಸಹಾ ಗಳಿಸಬಹದು ಅದರೆ ಆರೋಗ್ಯವನ್ನು ಗಳಿಸಲು ಸಾಧ್ಯವಿಲ್ಲ ಅದ್ದರಿಂದ ಹಣದ ಬದಲು ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡಬೇಕಿದೆ, ಸರಿಯಾದ ಸಮಯಕ್ಕೆ ತಪಾಸಣೆಯನ್ನು ಮಾಡಿಸಿ ವೈದ್ಯರು ತಿಳಿಸುವ ರೀತಿಯಲ್ಲಿ ಔಷಧಿಗಳನ್ನು ತೆಗೆದುಕೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವಂತೆ ತಿಳಿಸಿದರು.

ಉಪಾಧ್ಯಕ್ಷರಾದ ಕೆ.ಸಿ. ನಾಗರಾಜ್ ಮಾತನಾಡಿ, ಆರೋಗ್ಯವೇ ಸಂಪತ್ ಇದನ್ನು ಕಾಪಾಡಿಕೊಳ್ಳುವುದು ಎಲ್ಲರ ಕೆಲಸವಾಗಿದೆ ದೇಹದಲ್ಲಿ ಏನಾದರೂ ಏರು ಪೇರು ಕಂಡರೆ ಕೂಡಲೇ ವೈದ್ಯರನ್ನು ಸಂಪರ್ಕ ಮಾಡಿ ಚಿಕಿತ್ಸೆಯನ್ನು ಪಡೆಯುವುದರ ಮೂಲಕ ಉತ್ತಮವಾದ ಆರೋಗ್ಯವನ್ನು ಹೊಂದಬೇಕಿದೆ. ಆಸ್ಪತೆಗಳಲ್ಲಿ ವೈಯುತ್ತಿಕವಾಗಿ ಹೋಗುವ ಬದಲು ಈ ರೀತಿಯಾದ ಆರೋಗ್ಯ ಶಿಬಿರದಲ್ಲಿ ಬಂದು ತಪಾಸಣೆಯನ್ನು ಮಾಡಿಸುವುದರ ಮೂಲಕ ತಮ್ಮಲ್ಲಿ ಏನಾದರೂ ಕೂರೆತೆ ಇದರೆ ಮುಂದೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದರು.

ಡಾ,ಪ್ರಶಾಂತ್ ಮಾತನಾಡಿ ಚಿತ್ರದುರ್ಗದಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ಇಂದಿನ ದಿನಮಾನದಲ್ಲಿ ಉತ್ತಮವಾದ ಸೌಲಭ್ಯಗಳು ಸಿಗುತ್ತಿವೆ, ಅಲ್ಲದೆ ನುರಿತ ವೈದ್ಯರು ಸಹಾ ಇಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಅಗತ್ಯ ಬಿದ್ದಾಗ ಇದರ ಸದುಪಯೋಗ ಪಡೆಯಬೇಕಿದೆ. ಈಗ ಆಸ್ಪತ್ರೆಯಲ್ಲಿ ಉತ್ತಮವಾದ ಸೇವೆಯನ್ನು ನೀಡಲಾಗುತ್ತಿದೆ ರೋಗಿ ಬಂದಾಗಿನಿಂದ ಹೂರ ಹೋಗುವವರೆಗೂ ಸಹಾ ನೋಡಿಕೊಳ್ಳಲು ಜನರನ್ನು ನೇಮಿಸಲಾಗಿದೆ. ಹೊಸ ಹೊಸ ಯಂತ್ರಗಳನ್ನು ತರಿಸಲಾಗಿದೆ. ಆರೋಗ್ಯ ಕಾರ್ಡನ್ನು ನೀಡಲಾಗುತ್ತಿದೆ. ಇನ್ನೂ ಆಸ್ಪತ್ಸೆಯ ಅಭೀವೃದ್ದಿಯ ಬಗ್ಗೆ ಸಲಹೆಯನ್ನು ನೀಡಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ, ಸುಜಯ್, ವಿರಶೈವ ಸಮಾಜದ ಕಾರ್ಯದರ್ಶಿ ವಿರೇಂದ್ರ ಕುಮಾರ್, ಇನ್ನರ್ ವೀಲ್ ಕ್ಲಬ್ ನ ಜಂಟಿ ಕಾರ್ಯದರ್ಶಿ ವೀಣಾ ಜಯರಾಂ, ಮಹಿಳಾ ಸೇವಾ ಸಮಾಜದ ಕಾರ್ಯದರ್ಶಿ ಲತಾ ಉಮೇಶ್ ಭಾಗವಹಿಸಿದ್ದರು. ಶೈಲಾ ವಿಶ್ವನಾಥ್ ಪ್ರಾರ್ಥಿಸಿದರೆ, ಶ್ರೀಮತಿ ಲತಾ ಸ್ವಾಗತಿಸಿದರು. ಮೀನಾ ಜಯರಾಂ ವಂದಿಸಿದರು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಯಿತು.

RELATED ARTICLES
- Advertisment -
Google search engine

Most Popular

Recent Comments