ದಾವಣಗೆರೆ: ಕರ್ನಾಟಕ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸಿರುವುದು ಖಂಡನೀಯ. ಇದರಿಂದ ಜನಸಾಮನ್ಯರಿಗೆ ಬಹಳ ತೊಂದರೆಯಾಗುತ್ತಿದ್ದು, ಕೂಡಲೆ ದರ ಏರಿಕೆಯ ನಿರ್ಧಾರವನ್ನು ವಾಪಾಸು ಪಡೆದುಕೊಳ್ಳಬೇಕು ಎಂದು ವೆಲ್ಫೆರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ವೆಲ್ಫೆರ್ ಪಾರ್ಟಿ ಆಫ್ ಇಂಡಿಯಾ, ದಾವಣಗೆರೆ ಘಟಕ ಅಧ್ಯಕ್ಷ ಶಹಬಾಜ್ ಖಾನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೇ 5 ಗ್ಯಾರಂಟಿಗಳನ್ನು ಜಾರಿ ಮಾಡಿ, ಕಷ್ಟಕ್ಕೆ ಸಿಲುಕಿದೆ. ಗ್ಯಾರಂಟಿಗಳಿಗೆ ಹಣ
ಕೃಢಿಕರಿಸಲು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದೆ. ಒಂದು ಕೈಯಲ್ಲಿ 100 ರೂ.ಕೊಟ್ಟು, ಇನ್ನೊಂದು ಕೈಯಿಂದ 1000 ರೂ.ಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಇಂತಹ ಗ್ಯಾರಂಟಿಗಳಿಂದ ಸಾಮನ್ಯ ಜನರಿಗೆ ಯಾವುದೇ ಪ್ರಯೋಜನವಿಲ್ಲ ದೂರಿದರು.
ಈ ಗ್ಯಾರಂಟಿಗಳ ಹಿಂದಿನ ರಹಸ್ಯ ಕೇವಲ ಓಟಿಗಾಗಿ ಎಂಬುದು ಜನರಿಗೆ ತಿಳಿದಿದೆ. ಯಾವ ಪಕ್ಷಗಳಿಗೂ ಜನಸಾಮನ್ಯರ ಮೇಲೆ ಕಾಳಜಿಗಳಿಲ್ಲ. ಕಾಂಗ್ರೇಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸಿರುವ ನಿರ್ಧಾರವನ್ನು ಕೂಡಲೆ ವಾಪಾಸ್ಸು ಪಡೆದುಕೊಳ್ಳಬೇಕು. ಇಲ್ಲದಿದ್ದರೆ, ಎಲ್ಲಾ ಜಿಲ್ಲಾ ಕೇಂಧ್ರಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಬಿ.ಸಫೂರಾ, ಫರ್ ಕುಂದಾ, ವಸೀಮ್ ಆಹ್ಮದ್ ಮತ್ತು ಸದಸ್ಯರುಗಳು ಹಾಗೂ ಇನ್ನಿತರರು ಹಾಜರಿದ್ದರು.