ಶಾರ್ಟ್‌ ಸೆರ್ಕ್ಯೂಟ್‌: ಪ್ರಾವಿಜನ್‌ ಸ್ಟೋರ್‍ ಭಸ್ಮ

ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕಿನ ಹೊಳೆಹೊನ್ನೂರು ಮುಖ್ಯ ರಸ್ತೆಯಲ್ಲಿರುವ ಜಾವಳ್ಳಿ ಗ್ರಾಮದಲ್ಲಿ ಬುಧವಾರ ಆಕಸ್ಮಿಕವಾಗಿ ಶಾರ್ಟ್‌ ಸರ್ಕ್ಯೂಟ್‌ ಆಗಿ ಅಂಗಡಿಯಲ್ಲಿ ದಿನಸಿ ಸಾಮಾಗ್ರಿ  ಸುಟ್ಟು ಭಸ್ಮವಾಗಿದೆ. ಜಾವಳ್ಳಿಯ ವೀರಭದ್ರೇಶ್ವರ ಪ್ರಾವಿಜನ್ ಸ್ಟೋರ್‍ನಲ್ಲಿ ಈ ಘಟನೆ ನಡೆದಿದೆ.

 ಬುಧವಾರ ಸಂಜೆ 04.30 ರ ಸುಮಾರಿಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಸಂಭವಿಸಿದ್ದು, ದಿನಸಿ ಅಂಗಡಿಯ ಎಲ್ಲಾ ವಸ್ತುಗಳು ಸುಟ್ಟುಕರಕಲಾಗಿವೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದು, ಆ ಹೊತ್ತಿಗಾಗಲೇ ಎಲ್ಲಾ ದಿನಸಿ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹಾನಿಯಾಗಿವೆ.

ಸ್ಥಳೀಯ ಮಾಹಿತಿಯ ಪ್ರಕಾರ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಅವಗಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ದಿನಸಿ ಅಂಗಡಿಯ ಮಾಲೀಕ ಕೆ.ಬಿ.ವೀರಭದ್ರಪ್ಪ ಅವರಿಗೆ ಅಪಾರ ನಷ್ಟ ಉಂಟಾಗಿದೆ.