ಗುರುವಾರ ಪತ್ರಿಕಾಗೋಷ್ಟಿಯಲ್ಲಿ ನಟರಾಜ್ ಭಾಗವತ್ ಮಾಹಿತಿ
ಶಿವಮೊಗ್ಗ : ಅ.19 ರಂದು ದಶಗ್ರಂಥ ಪಾರಾಯಣದ ಶೋಭಾಯಾತ್ರೆ ಮತ್ತು ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪೂರ್ಣ ಋಗ್ವೇದ ಘನ ಪಾರಾಯಣ ಸಮಾರೋಪ ಕಾರ್ಯಕ್ರಮವನ್ನು ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಸಂಜೆ 7.00 ಗಂಟೆಗೆ ನಡೆಸಲಾಗುವುದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ತಿಳಿಸಿದರು.
ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಭಾ ಕಾರ್ಯಕ್ರಮದಲ್ಲಿ ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಶ್ರೀಮದ್ ಜಗ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಹಾಗೂ ಶ್ರೀ ಕ್ಷೇತ್ರ ಹೆಬ್ಬಳ್ಳಿ ಚೈತನ್ಯಾಶ್ರಮದ ಪರಮಪೂಜ್ಯ ಶ್ರೀ ದತ್ತಾವಧೂತ ಮಹಾರಾಜರು ಮತ್ತು ಶ್ರೇಷ್ಟ ಜ್ಯೋತಿಷಿಗಳಾದ ಗಣೇಶ ದ್ರಾವಿಡ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದಶಗ್ರಂಥ ಘನಪಾಠಿಗಳಾದ ವೇದ ಬ್ರಹ್ಮ ಶ್ರೀಚಂದ್ರಮೌಳಿ ಘನಪಾಠಿ ಎಂಬ ಯುವ ವಿದ್ವಾಂಸರನ್ನು ಗೌರವಿಸಲಾಗುವುದು. ಶಿವಮೊಗ್ಗ ನಗರದ ಗಣ್ಯಮಾನ್ಯರು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪ್ರತಿದಿನ 7 ಗಂಟೆಗಳಂತೆ ಒಟ್ಟು 630 ಗಂಟೆಗಳ, ಒಟ್ಟು 90 ದಿನಗಳ ಕಾಲ ಈ ಘನಪಾರಾಯಣ ನಡೆದಿದ್ದು, ಅ.18 ರಂದು ಮುಕ್ತಾಯಗೊಳ್ಳಲಿದೆ. ಇಂತಹ ವಿದ್ವತ್ ಪಾರಾಯಣವು ಕಾಶಿ ಮತ್ತು ಪೂಣೆ ಬಿಟ್ಟರೆ ಬೇರೆಯಲ್ಲಿಯೂ ನಡೆದಿಲ್ಲ. ವಿಶ್ವವಿಖ್ಯಾತ ರಿಯಾಲಿಟಿ ಶೋಗಳಿಗಿಂತ ಇದು ದೊಡ್ಡ ಸಾಧನೆಯಾಗಿದ್ದು, ಈ ಐತಿಹಾಸಿಕ ಅಪರೂಪದ ಕಾರ್ಯವು ಶಿವಮೊಗ್ಗದಲ್ಲಿ ನಡೆದು ಮುಕ್ತಾಯ ಕಾಣುತ್ತಿರುವಾಗ ಈ ವಿದ್ವಾಂಸರನ್ನು ಶಿವಮೊಗ್ಗದ ಜನತೆ ಗೌರವಿಸಲಿದೆ ಎಂದರು.