Tuesday, July 23, 2024
Google search engine
Homeಇ-ಪತ್ರಿಕೆಜೂ.16ಕ್ಕೆ ಶಾಮನೂರು ಶಿವಶಂಕರಪ್ಪರ 94ನೇ ಹುಟ್ಟುಹಬ್ಬ

ಜೂ.16ಕ್ಕೆ ಶಾಮನೂರು ಶಿವಶಂಕರಪ್ಪರ 94ನೇ ಹುಟ್ಟುಹಬ್ಬ

​ಅಭಿಮಾನಿಗಳ ಬಳಗದಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳು

ದಾವಣಗೆರೆ : ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬಾಪೂಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ ಇದೇ ಜೂ.16ಕ್ಕೆ 93 ವರ್ಷಗಳನ್ನು ಪೂರೈಸಿ 94ನೇ ವಸಂತಕ್ಕೆ ಪಾದಾರ್ಪಣೆ ಮಾಡಲಿದ್ದು, ಎಸ್. ಎಸ್. ಅಭಿಮಾನಿ ಬಳಗದಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಶಿವಶಂಕರಪ್ಪ ಅವರ ಹುಟ್ಟು ಹಬ್ಬದ ಭಾಗವಾಗಿ ಜೂ.13ರಿಂದ 16ರವರೆಗೆ ದಾವಣಗೆರೆ ನಗರದ ವಿವಿಧ ಕಡೆಗಳಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳು ನಡೆಯಲಿದ್ದು, ಜೂ.13ರ ಬೆಳಿಗ್ಗೆ 11ಗಂಟೆಗೆ ಅವರಗೆರೆಯ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ವಿತರಿಸಲಾಗುವುದು. 14ರಂದು ವನಿತಾ ಸಮಾಜದ ಹಿರಿಯ ವನಿತೆಯರಿಗೆ ಸೀರೆ ವಿತರಣೆ ಹಾಗೂ ಸಿಹಿ ಊಟದ ವ್ಯವಸ್ಥೆ, 15 ರಂದು ಅಂಗವಿಕಲ ವಸತಿ ಶಾಲಾ ಮಕ್ಕಳಿಗೆ ಸಿಹಿ ವಿತರಣೆ, 16ರಂದು ನಗರದ ಐಎಂಎ ಹಾಲಿನಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ವಿವರ ನೀಡಿದರು.

ಶಾಮನೂರು ಶಿವಶಂಕರಪ್ಫನವರಿಗೆ 94 ವರ್ಷ, ಅವರು ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ವಯಸ್ಸಿನ ಶಾಸಕರು. ಅವರು ಶತಾಯುಷಿಯಾಗಿ ಬಳಲಿ ಎಂಬುದು ಅಭಿಮಾನಿಗಳ ಆಶಯ. ಕ್ರೀಡಾಪಟುಗಳ ಸಂಘದಿಂದ ಶಂಕರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಪ್ರತಿವರ್ಷ ಎಸ್. ಎಸ್ .ಕಪ್ ಕ್ರಿಕೇಟ್ ಪಂಧ್ಯಾವಳಿ ನಡೆಯಲಿದೆ. ಈ ವರ್ಷವೂ ಆಯೋಜಿಸಲಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್. ಮಲ್ಲಿಕಾರ್ಜುನ್, ಕೆ.ಜಿ. ಶಿಶಕುಮಾರ್, ಅಯುಬ್ ಪೈಲ್ವಾನ್, ಡೋಲಿ ಚಂದ್ರು, ಮಂಗಳಮ್ಮ, ಮಂಜುಳಮ್ಮ, ದಾಕ್ಷಾಯಣಮ್ಮ, ಕವಿತ, ಚಂದ್ರಮ್ಮ ಹಾಗೂ ಇತರರು ಇದ್ದರು.

RELATED ARTICLES
- Advertisment -
Google search engine

Most Popular

Recent Comments