Sunday, November 10, 2024
Google search engine
Homeಇ-ಪತ್ರಿಕೆಮಹರ್ಷಿ ವಾಲ್ಮೀಕಿಗಳು ಅಹಿಂಸೆಯ ಪ್ರತಿಪಾದಕರು: ಬಿ.ವೈ.ಆರ್‌

ಮಹರ್ಷಿ ವಾಲ್ಮೀಕಿಗಳು ಅಹಿಂಸೆಯ ಪ್ರತಿಪಾದಕರು: ಬಿ.ವೈ.ಆರ್‌


ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯ

ಶಿವಮೊಗ್ಗ  :  ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹನೀಯ ಮಹರ್ಷಿ ವಾಲ್ಮೀಕಿಯವರು,  ಆರಂಭದಲ್ಲಿ ಬೇಡರಾಗಿ. ಆನಂತರ ಸಂತರಾಗಿ, ಅಹಿಂಸೆಯ ಪ್ರತಿಪಾದಕರಾಗಿ ಜಗತ್ತಿಗೆ ಸನ್ಮಾರ್ಗದ ಸಂದೇಶ ಸಾರಿದವರು  ಎಂದು ಸಂಸದ ಬಿ.ವೈ.ರಾಘವೇಂದ್ರ ಬಣ್ಣಿಸಿದರು.

 ಜಿಲ್ಲಾಡಳಿತ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಹಾಕಾವ್ಯ ರಾಮಾಯಣದ ವೈಶಿಷ್ಟ್ಯತೆ ಮತ್ತು ಶತಶತಮಾನಗಳಿಂದ ಗಳಿಸಿರುವ ಜನಪ್ರಿಯತೆ ಯಿಂದಾಗಿ ಕೃತಿಕಾರ ಮಹರ್ಷಿ ವಾಲ್ಮೀಕಿಯವರು ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುತ್ತಾರೆ ಹಾಗೂ ಆರಾಧಿಸಲ್ಪಡುತ್ತಾರೆಂದು ಅಭಿಪ್ರಾಯ ಪಟ್ಟರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ  ಮಾತನಾಡಿ, ಒಬ್ಬ ಸಾಮಾನ್ಯವ್ಯಕ್ತಿ ಮಹಾಕವಿ ಪ್ರಪಂಚಕ್ಕೆ ಅದ್ಬುತ ಗ್ರಂಥವನ್ನು ನೀಡಿದ ಶ್ರೇಷ್ಠವ್ಯಕ್ತಿ ಮಹರ್ಷಿ ವಾಲ್ಮಿಕಿ ಅವರು  ನಮಗೆ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಜಯಂತಿಗಳ ಮೂಲಕ ತೆಗೆದುಕೊಳ್ಳಬೇಕಾಗಿದೆ‌ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಶಾಸಕ ಎಸ್ ಎನ್ ಚನ್ನಬಸಪ್ಪ  ಮಾತನಾಡಿ, ಭಾರತದಲ್ಲಿ ಮಹಾನ್ ವ್ಯಕ್ತಿಗಳು ಕೂಡ ಜಗತ್ತಿಗೆ ಶಕ್ತಿಯಾಗಿದ್ದಾರೆ, ಅದರಲ್ಲಿ‌ ಮಹರ್ಷಿ ವಾಲ್ಮಿಕಿ ಅವರು ಮೊದಲ ಸಾಲಿನಲ್ಲಿ ನಿಲುತ್ತಾರೆ.ಅವರ ಆದರ್ಶಗಳನ್ನು ನಾವು ಪಾಲಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್. ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್,  ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ಅಧ್ಯಕ್ಷ ಹೆಚ್. ಟಿ. ಬಳಿಗಾರ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಓ ಎನ್ ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಧಿಕಾರಿ ಮಟ್ಟದ ಹಿರಿಯ ಅಧಿಕಾರಿಗಳು, ಸಮುದಾಯದ ಮುಖಂಡರು, ವಿದ್ಯಾರ್ಥಿ-ವಿದ್ಯಾರ್ಥಿ ನಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments