ಸಚಿವರ ದುರಂಹಕಾರಕ್ಕೆ ತಕ್ಕ ಉತ್ತರ
ಮಧು ಬಂಗಾರಪ್ಪ ವಿರುದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ವಾಗ್ದಾಳಿ
ಸೊರಬ: ಲೋಕಸಭಾ ಚುನಾವಣೆ ನಂತರ ವಿರೋಧ ಪಕ್ಷದವರನ್ನು ಸಭೆ ಸಮಾರಂಭಗಳಲ್ಲಿ ಟೀಕೆ ಟಿಪ್ಪಣಿಗಳನ್ನು ಮಾಡುವ ಅವಶ್ಯಕತೆ ಇಲ್ಲ ಕಾರಣ ಜನಗಳೇ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದರು.
ಗುರುವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಇರುವ ದಿವಂಗತ ಎಸ್ ಬಂಗಾರಪ್ಪ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಹೆಚ್ಚಿನ ಅಂತರದ ಗೆಲುವಿಗೆ ಉತ್ತರವಾಗಿ ಲೋಕಸಭಾ ಚುನಾವಣೆಯಲ್ಲಿ ಸುಮಾರು 18 ಸಾವಿರ ಅಧಿಕ ಮತಗಳು ವಿರೋಧ ಪಕ್ಷದ ಅಭ್ಯರ್ಥಿಗೆ ಲಭಿಸಿರುವುದು ದಾಖಲೆಯಾಗಿರುತ್ತದೆ. ಈ ಹಿಂದೆ ಯಾವ ವಿರೋಧ ಪಕ್ಷದ ಅಭ್ಯರ್ಥಿಯು ಕೂಡ ಇಷ್ಟೊಂದು ಅಂತರದ ಮತಗಳನ್ನು ಪಡೆದಿರುವುದಿಲ್ಲ ಇದು ತಾಲೂಕಿನ ಶಾಸಕರ ದುರಹಂಕಾರಕ್ಕೆ ಮತದಾರರು ನೀಡಿದ ಉತ್ತರವಾಗಿರುತ್ತದೆ ಎಂದು ತಿಳಿಸಿದರು.
ತಾಲೂಕು ಯಾವುದೇ ಕಾರಣಕ್ಕೂ ಅಭಿವೃದ್ಧಿಯ ದೃಷ್ಟಿಯಿಂದ ಹಿಂದೆ ಉಳಿಯಬಾರದು, ದಂಡವತಿ ಯೋಜನೆ ಸೇರಿದಂತೆ ಶರಾವತಿ ಹಿನ್ನೀರಿನಿಂದ ಮಲೆನಾಡು ಸೇರಿದಂತೆ ಕುಡಿಯುವ ನೀರಿನ ಯೋಜನೆ ತಾಳಗುಪ್ಪ ಮಾರ್ಗವಾಗಿ ಹುಬ್ಬಳ್ಳಿಗೆ ರೈಲ್ವೆ ಕಲೆಕ್ಷನ್ ವಿದ್ಯುತ್ , ರಸ್ತೆ ಸೇರಿದಂತೆ ಮೂಲಭೂತ ಸಮಸ್ಯೆಗಳಿಗೆ ಸಂಸದ ಬಿ. ವೈ. ರಾಘವೇಂದ್ರ ಅವರ ಮೂಲಕ ಹಣವನ್ನು ತಂದು ತಾಲೂಕನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಸಭೆ ಸಮಾರಂಭಗಳನ್ನು ಬಿಟ್ಟು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಕ್ಕೆ ಬೇಕಾಗುವ ಅಭಿವೃದ್ಧಿಯನ್ನು ಚರ್ಚಿಸಿ ಸಂಸದರ ಗಮನಕ್ಕೆ ತರುವುದರ ಮೂಲಕ ಕಾರ್ಯಕರ್ತರು ಜಾಗೃತವಾಗಿ ಕಾರ್ಯನಿರ್ವಹಿಸಬೇಕು ಎಂದ ಅವರು ಸದ್ಯದಲ್ಲಿಯೇ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸೊರಬ ಮತ್ತು ಆನವಟ್ಟಿಯಲ್ಲಿ ಅಭಿನಂದನಾ ಸಭೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರಾಜಕೀಯ ಒಂದು ಜಾತಿ, ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ನೆಡೆದರೆ ಯಶಸ್ವಿ ಸದ್ಯವಾಗುತ್ತದೆ ಆದರೆ ಇಲ್ಲಿನ ಜನಪ್ರತಿನಿಧಿ ಜಾತಿ ರಾಜಕಾರಣ ಮಾಡುವ ಮೂಲಕ ಪ್ರಬಲವಾದ ಒಂದು ವರ್ಗದ ಮತವನ್ನು ಸೆಳೆಯಲು ಹೋಗಿ ಮುಗ್ಗರಿಸಿದ್ದಾರೆ. ಅಲ್ಲದೆ ಎಸ್. ಬಂಗಾರಪ್ಪ ಮತ್ತು ಡಾ.ರಾಜಕುಮಾರ್ ಅವರ ಹೆಸರನ್ನು ರಾಜಕಾರಣಕ್ಕೆ ಎಳೆದು ತಂದು ಚುನಾವಣೆ ಎಂಬ ಯುದ್ಧದಲ್ಲಿ ಗೆಲ್ಲಲಾಗದೆ ಮತದಾರರಿಂದ ತಿರಸ್ಕೃತ ಗೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರಕಾಶ್ ತಲಕಾಲ್ಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಎಮ್.ಡಿ.ಉಮೇಶ್, ಗುರು ಕುಮಾರ್ ಪಾಟೀಲ್, ಅಮಿತ್ ಗೌಡ, ಪ್ರಭಾಕರ್ ಶಮನವಳ್ಳಿ, ವಿನಾಯಕ್ ತವನಂದಿ, ಸುಧಾ ಶಿವಪ್ರಸಾದ್, ಅಶೋಕ್ ಶೆಟ್, ರಾಜು ಮಾಂಬಳ್ಳಿ ಕೊಪ್ಪ, ನಾಗಪ್ಪ ವಕೀಲರು ಸೇರಿದಂತೆ ಕಾರ್ಯಕರ್ತರು ಇದ್ದರು.