ಪತ್ರಿಕಾಗೋಷ್ಟಿಯಲ್ಲಿ ಚೇತನ್ ದಾಸರಹಳ್ಳಿ ಮಾಹಿತಿ
ಶಿವಮೊಗ್ಗ : ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಕೆಎಸ್‍ಪಿಎಲ್ 2024 ರ ಕ್ರಿಕೆಟ್ ಟೂರ್ನಿ ನ.01 ರಿಂದ ಡಿ.01 ರವರೆಗೆ ಒಂದು ತಿಂಗಳ ಕಾಲ ಬೆಂಗಳೂರು ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಗ್ರೌಂಡ್‍ನಲ್ಲಿ ನಡೆಯಲಿದೆ ಎಂದು ಶಿವಮೊಗ್ಗ ಟೈಗರ್ಸ್ ಮಾಲೀಕರಾದ ಚೇತನ್ ದಾಸರಹಳ್ಳಿ ತಿಳಿಸಿದರು.
ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‍ಪಿಎಲ್-2024 ಇದರ ಉದ್ಘಾಟನಾ ಕಾರ್ಯಕ್ರಮವು ನ.01 ರಂದು ಸಂಜೆ 4.00 ಆಚಾರ್ಯ ಗ್ರೌಂಡ್‍ನಲ್ಲಿ ನಡೆಯಲಿದ್ದು, ಯಾರೆಲ್ಲಾ ಗಲ್ಲಿ ಕ್ರಿಕೆಟ್ ಆಟಗಾರರು ಹಾಗೂ ಗ್ರಾಮೀಣ ಮಟ್ಟದ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಒಂದು ಅದ್ಭುತವಾದ ಅವಕಾಶವನ್ನು ಕಲ್ಪಿಸುವ ಪ್ರಯತ್ನವೇ ಕೆಎಸ್‍ಪಿಎಲ್-2024 ರ ಉದ್ದೇಶವಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಆಟಗಾರರ ಆಯ್ಕೆಯ ಟ್ರಯಲ್ಸ್‍ನ್ನು ಕೆಎಸ್‍ಎಸ್‍ಸಿಎ ವತಿಯಿಂದಲೇ ನಡೆಸಿ, ಅಲ್ಲಿ ಆಯ್ಕೆಯಾದ 700 ಜನ ಪ್ರತಿಭಾನ್ವಿತ ಯುವ ಕ್ರೀಡಾಪಟುಗಳಲ್ಲಿ, 32 ತಂಡಗಳಾಗಿ ವಿಭಾಗ ಮಾಡಲಾಯಿತು. ಇದರಲ್ಲಿ ಶಿವಮೊಗ್ಗ ಟೈಗರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ 21 ಜನ ಆಟಗಾರರಲ್ಲಿ 17 ಆಟಗಾರರು ಸ್ಥಳೀಯ ಶಿವಮೊಗ್ಗ ಜಿಲ್ಲೆಯ ಯುವ ಕ್ರೀಡಾ ಪ್ರತಿಭಾನ್ವಿತರಿಗೆ ಅವಕಾಶವನ್ನು ನೀಡಲಾಗಿದೆ. ಈ ಟೂರ್ನಿಯ ಎಲ್ಲ ಆಟಗಳು ದೂರ ದರ್ಶನ ಚಂದನ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ ಎಂದರು.
ಅಸೋಸಿಯೇಶನ್ ನ ಮೀಡಿಯ ಹೆಡ್ ಅರ್ಪಿತ್ ಮಾತನಾಡಿ, ಸಾಫ್ಟ್ ಬಾಲ್ ಅಸೋಸಿಯೇಷನ್‍ನ್ನು ತುಂಬಾ ಎತ್ತರಕ್ಕೆ ತೆಗೆದುಕೊಳ್ಳಬೇಕು ಅನ್ನುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ಎಲ್ಲರ ಬೆಂಬಲ, ಸಹಕಾರ ಅತ್ಯಗತ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ, ವಿಕ್ರಂ, ಚೇತನ್, ಸುಧಾಕರ್, ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚೇತನ್ ದಾಸರಹಳ್ಳಿ, ಶಿವಮೊಗ್ಗ ಟೈಗರ್ಸ್ ಮಾಲೀಕರು:
ಶಿವಮೊಗ್ಗ ಟೈಗರ್ಸ್ ತಂಡದ ಪಂದ್ಯಾವಳಿಯ ಮೊದಲ ಮ್ಯಾಚ್ ನ.24 ರಂದು ಸಂಜೆ 5.00 ಗಂಟೆಯಿಂದ 7.30 ರವರೆಗೆ ಶಿವಮೊಗ್ಗ ಟೈಗರ್ಸ್ ವರ್ಸಸ್ ಸಿಎಂಎಂ ಹಾವೇರಿ, ಎರಡನೇ ಮ್ಯಾಚ್ ನ.25 ರಂದು ಸಂಜೆ 7.00 ಗಂಟೆಯಿಂದ ರಾತ್ರಿ 9.30 ರವರೆಗೆ ಶಿವಮೊಗ್ಗ ಟೈಗರ್ಸ್ ವರ್ಸಸ್ ಬೆಂಗಳೂರು ರೂರಲ್ ಕೆಂಪೇಗೌಡ ಮತ್ತು ಮೂರನೇ ಮ್ಯಾಚ್ ನ.27 ರಂದು ಸಂಜೆ 7.00 ಗಂಟೆಯಿಂದ ರಾತ್ರಿ 9.30 ರವರೆಗೆ ಶಿವಮೊಗ್ಗ ಟೈಗರ್ಸ್ ವರ್ಸಸ್ ಗದಗ್ ಪವರ್ಸ್ ನಡುವೆ ನಡೆಯಲಿದೆ. ಎಂದು ಶಿವಮೊಗ್ಗದ ಜನತೆ ಆಗಮಿಸಿ ತಂಡಕ್ಕಡ ಪ್ರೋತ್ಸಾಹ ನೀಡಬೇಕು.