ಶಿವಮೊಗ್ಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರ, ರೇಡಿಯೋ ಶಿವಮೊಗ್ಗ೯೦.೮, ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜ್ ಜೊತೆಗೆ ಭಗತ್ ಸಿಂಗ್ ಯುವಕರ ಸಂಘ ಹಾಗೂ ಮಲವಗೊಪ್ಪ ಗ್ರಾಮಸ್ಥರ ಆಶ್ರಯದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಜಲ ಮೂಲ ಸಂರಕ್ಷಣೆ ಮತ್ತು ಸ್ವಚ್ಛತೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಲವಗೊಪ್ಪ ಶ್ರೀ ಚನ್ನಬಸವ ದೇವಸ್ಥಾನದ ಕಲ್ಯಾಣಿ ಸ್ವಚ್ಛತೆ ಜೊತೆಗೆ ನಾಗರೀಕರಿಗೆ ಗಿಡ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಲೇಜ್ ವಿಶ್ರಾಂತ ಪ್ರಾಂಶುಪಾಲ ಪ್ರೊ. ಹೂವಯ್ಯ ಗೌಡ ಅವರು ದೇವಸ್ಥಾನದ ಆವರಣದಲ್ಲಿ ಹೂವಿನ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಈ ವ?ದ ಘೋಷಣೆಯಾದ ಭೂಮಿ ಪುನರ್ ಸ್ಥಾಪನೆ ಮರುಭೂಮಿಕರಣ ಮತ್ತು ಬರ ಸ್ಥಿತಿ ಸ್ಥಾಪಕತ್ವ ಅಂದರೆ ನಾವೀಗಾಗಲೇ ಸಾಕ? ಭೂಮಿಯನ್ನ ಹಾಳು ಮಾಡಿದ್ದೇವೆ. ಅದರ ಪರಿಣಾಮವಾಗಿ ಹಸಿರಾದ ನಾಡು ಮರುಭೂಮಿ ಆಗುತ್ತಿದೆ. ಜೊತೆಯಲ್ಲಿ ಅನಾವೃಷ್ಟಿ ಅತಿವೃಷ್ಟಿ ಹೆಚ್ಚಾಗುತ್ತಿದ್ದು, ಭೂಮಿಯ ಸಮತೋಲನ ತಪ್ಪು ತಿರುವ ಸಂಕೇತವಾಗಿದೆ. ಹಾಗಾಗಿ ನಾವೆಲ್ಲ ನಮ್ಮ ಸರಳವಾದ ಜೀವನ ಶೈಲಿಯಿಂದ ಭೂಮಿಯನ್ನು ಮರು ಸ್ಥಾಪನೆ ಮಾಡಬೇಕು ಎಂದು ಹೇಳಿದರು.
ಕಿಡ್ಸ್ ಸಂಸ್ಥೆಯ ಅಧ್ಯಕ್ಷ ಎಸ್. ಚಂದ್ರಶೇಖರ್ ಹಾಗೂ ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಮಧು ಜಿ. ಅವರು ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಮಧು ಅವರು ಮಾತನಾಡಿ, ನೀರು ಅತ್ಯಮೂಲ್ಯವಾದ ಅಂತಹ ವಸ್ತುವಾಗಿದ್ದು, ಇದರ ಸಂರಕ್ಷಣೆ ಅತ್ಯಂತ ಪ್ರಮುಖವಾಗಿದೆ. ನೀರಿನ ಮಟ್ಟ ಯಥೇಚ್ಛವಾಗಿ ಕುಸಿತ ಇದ್ದು ಅಂತರ್ಜಲದ ಮಟ್ಟವು ಸಹ ಕಮ್ಮಿಯಾಗುತ್ತಿದೆ. ಈ ಸಂದರ್ಭದಲ್ಲಿ ನಾವು ನೀರಿನ ಬಗ್ಗೆ ಹೆಚ್ಚು ಕಾಳಜಿ ತೋರಿಸಬೇಕಾಗಿದೆ. ಜೊತೆಯಲ್ಲಿ ಇಂತಹ ಜಲಮೂಲಗಳ ಬಗ್ಗೆ ಅದರ ಇತಿಹಾಸವನ್ನು ತಿಳಿದು ಅದರ ಸಂರಕ್ಷಣೆಯ ಕಾರ್ಯದಲ್ಲಿ ಆಯಾ ಗ್ರಾಮದವರು ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ನಂತರದಲ್ಲಿ ಎನ್‌ಎಸ್‌ಎಸ್‌ನ ೮೦ ವಿದ್ಯಾರ್ಥಿಗಳು ಈ ಸ್ವ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲ್ಯಾಣಿ ತುಂಬಾ ಹಬ್ಬಿನಿಂದ ಬಳ್ಳಿಗಳು ಮತ್ತು ಕಸಗಳನ್ನಲ್ಲ ಸ್ವಚ್ಛಗೊಳಿಸಿ ಶುದ್ಧವಾದ ನೀರಿನ ಕಲ್ಯಾಣಿ ಎಲ್ಲರಿಗೂ ಕಾಣುವಂತೆ ಸ್ವಚ್ಛ ಮಾಡಿದರು.
ಮುಕ್ತಾಯ ಸಮಾರಂಭದಲ್ಲಿ ಪ್ರೊ. ಎ.ಎಸ್. ಚಂದ್ರಶೇಖರ್, ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗದ ನಿರ್ದೇಶಕ ಜಿಎಲ್ ಜನಾರ್ಧನ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಸುಮತಿ ಶಿಲ್ಪಾ ಇದ್ದರು.