Sunday, October 13, 2024
Google search engine
Homeಇ-ಪತ್ರಿಕೆಸಿಇಟಿ, ನೀಟ್‌ : ದಾಖಲೆ ಅಪ್‌ ಲೋಡ್‌ ಗೆ  ಅವಕಾಶ ಕೊಡಿ

ಸಿಇಟಿ, ನೀಟ್‌ : ದಾಖಲೆ ಅಪ್‌ ಲೋಡ್‌ ಗೆ  ಅವಕಾಶ ಕೊಡಿ

ಜಿಲ್ಲಾ ಯುವ ಕಾಂಗ್ರೆಸ್‌ ಆಗ್ರಹ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ

ಶಿವಮೊಗ್ಗ: ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ದಾಖಲೆಗಳ ಪರಿಶೀಲನೆಗೆ ಹಾಗೂ ಇನ್ನಿತರ ದಾಖಲಾತಿಗಳ ಅಪ್‌ಲೋಡ್‌ಗೆ ಮತ್ತೊಮ್ಮೆ ಅವಕಾಶ ನೀಡಲು ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶುಕ್ರವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಸಕ್ತ ಶೈಕ್ಷಣಿಕ ವರ್ಷದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಲ್ಲಿ ನಡೆದ ಎಡವಟ್ಟುಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವಂತಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೈಬಿಡಲಾಗಿದ್ದ ಪಠ್ಯಕ್ರಮದಿಂದ ಸಿಇಟಿಯಲ್ಲಿ ೫೦ ಪ್ರಶ್ನೆಗಳನ್ನು ಕೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿ ಸ್ನೇಹಿಯಾಗಬೇಕಿದ್ದ ಪ್ರಾಧಿಕಾರದ ಕೆಲವು ಏಕಪಕ್ಷೀಯ ನಿರ್ಧಾರಗಳ ಬಗ್ಗೆ ವಿದ್ಯಾರ್ಥಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ ಎಂದು ಹೇಳಲಾಗಿದೆ. ಇದೀಗ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ್ದರೂ ಸಹ ರ್‍ಯಾಂಕಿಂಗ್‌ನಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದು, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಹೆಚ್ಚಿನ ಶುಲ್ಕ ಪಾವತಿಸಿಯಾದರೂ ವೈದ್ಯಕೀಯ ಸೀಟು ಪಡೆಯಲು ವಿದ್ಯಾರ್ಥಿಗಳು ಪೋ?ಕರು ಪರದಾಡುತ್ತಿದ್ದು, ವೈದ್ಯಕೀಯ ಸೀಟ್ ಸಿಗದವರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯಲು ಮುಂದಾಗುತ್ತಿದ್ದು, ಕೆಲವು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ದುಬಾರಿ ಶುಲ್ಕವನ್ನು ಕೇಳುತ್ತಿರುವುದು ಕಷ್ಟಕರದ ಸಂಗತಿಯಾಗಿದೆ. ನೀಟ್‌ನಲ್ಲಿ ಅತ್ಯುತ್ತಮ ಅಂಕ ಪಡೆದರೂ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಗುವುದು ಅಸಾಧ್ಯ ಎಂಬಂತ ಸ್ಥಿತಿ ಉದ್ಭವವಾಗಿದೆ. ಇದೀಗ ವಿದ್ಯಾರ್ಥಿಗಳು ಆಡಳಿತ ಮಂಡಳಿ ಮೂಲಕ ಸೀಟು ಪಡೆಯಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೊಸ ಪ್ರಯೋಗದಿಂದ  ಇಷ್ಟು ವರ್ಷಗಳ ಕಾಲ ವಿದ್ಯಾರ್ಥಿಗಳು ಸಲ್ಲಿಸಿದ್ದ ದಾಖಲೆಗಳ ಭೌತಿಕ ಪರಿಶೀಲನೆ ನಡೆಸುತ್ತಿತ್ತು. ಆದರೆ ಪ್ರಸಕ್ತ ವ? ಆನ್‌ಲೈನ್ ಪರಿಶೀಲನೆ ನಡೆಸಲು ಮುಂದಾಗಿದೆ. ಈ ಬಗ್ಗೆಯಂತೂ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿಯೇ ಇಲ್ಲ. ಅನೇಕ ವಿದ್ಯಾರ್ಥಿಗಳು ಕೈಬಿಟ್ಟು ಹೋಗಿರುವ ದಾಖಲೆಗಳನ್ನು ಭೌತಿಕ ಪರಿಶೀಲನೆ ಅಥವಾ ಕೌನ್ಸೆಲಿಂಗ್‌ಗೂ ಮುನ್ನ ಸಲ್ಲಿಸುವ ಅವಕಾಶವಿದೆ ಎಂಬ ಕಲ್ಪನೆಯಲ್ಲಿದ್ದಾರೆ ಎಂದರು.

 ಶಿವಮೊಗ್ಗ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ೧೪ ಕ್ಷೇತ್ರಗಳಿಗೆ ೨ನೇ ಹಂತದ ಲೋಕಸಭಾ ಚುನಾವಣೆ ಮೇ ೭ರಂದು ನಡೆದಿತ್ತು. ಕಂದಾಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಇನ್ನು ಮೇ ೧೦ ಬಸವ ಜಯಂತಿ, ಮೇ ೧೧ರಂದು ೨ನೇ ಶನಿವಾರ, ಮೇ ೧೨ ಭಾನುವಾರ ಮೂರು ದಿನಗಳ ಕಾಲ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದ ಕಾರಣ ಅಗತ್ಯ ದಾಖಲೆಗಳು, ಶಾಲಾ ಕಾಲೇಜು ಹೆಸರು, ಜಾತಿ ಮತ್ತು ಆದಾಯ ಮೀಸಲಾತಿ ಪ್ರಮಾಣ ಪತ್ರಗಳನ್ನು ಸರ್ಕಾರಿ ಕಚೇರಿಗಳಿಂದ ಪಡೆಯಲು ವಿದ್ಯಾರ್ಥಿಗಳು ಸಮಯವೇ ಇಲ್ಲದಂತಾಗಿ ಕೆ.ಇ.ಎ ಹೇಳಿದಂತೆ ಆನೈನಲ್ಲಿ ಅಪ್ಲೋಡ್ ಮಾಡಲು ಹಾಗೂ ತಿದ್ದುಪಡಿಗಳೇನಿದ್ದರೂ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಆನ್‌ಲೈನ್ ಪರಿಶೀಲನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ ಪಡುತ್ತಿದ್ದು, ಕಾರಣವೇನೆಂದರೆ ಕೆಲವು ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆಗಳಿದ್ದು, ಈ ಹಿಂದೆ ದಾಖಲೆಗಳ ಭೌತಿಕ ಪರಿಶೀಲನೆ ವೇಳೆ ಅಕಸ್ಮಾತ್ ಯಾವುದೋ ತಿದ್ದುಪಡಿ, ಇತರೆ ಸಮಸ್ಯೆಗಳೇನಿದ್ದರೂ ಕೆ.ಇ.ಎ ಬೆಂಗಳೂರು ಕಚೇರಿಗೂ ಹೋಗಿ ವಿದ್ಯಾರ್ಥಿಗಳು ಸಿ.ಇ.ಟಿ. ನೀಟ್ ಕೌನ್ಸೆಲಿಂಗ್‌ಗೂ ಮುನ್ನ ಅಪಡೇಟ್ ಮಾಡಿಸುವ ಅವಕಾಶ ಹಿಂದಿನ ವರ್ಷಗಳಲ್ಲಿ ಇತ್ತು. ಆದರೆ ಈ ವರ್ಷ ಈ ಅವಕಾಶದ ಬಗ್ಗೆ ಕೆ.ಇ.ಎ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆನ್‌ಲೈನ್ ಪರಿಶೀಲನೆ ಸಾಧಕ ಬಾಧಕಗಳ ಅಧ್ಯಯನ ನಡೆಸದೆಯೇ ಕೆ.ಇ.ಎ ಈ ನಿರ್ಧಾರ ಕೈಗೊಂಡಿರುವ ಬಗ್ಗೆಯೂ ವಿದ್ಯಾರ್ಥಿ ವಲಯದಿಂದ ಆಕ್ಷೇಪಗಳು ವ್ಯಕ್ತವಾಗುತ್ತಿವೆ ಎಂದು ತಿಳಿಸಿದರು.

ಕೂಡಲೇ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನವನ್ನು ನೀಡಿ ವಿದ್ಯಾರ್ಥಿಗಳಿಗೆ ಉಂಟಾಗಿರುವ ಗೊಂದಲ ಮತ್ತು ವಿದ್ಯಾರ್ಥಿಗಳು ಪರದಾಡುತ್ತಿರುವ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವುದರೊಂದಿಗೆ, ಸಿ.ಇ.ಟಿ ಮತ್ತು ನೀಟ್ ವಿದ್ಯಾರ್ಥಿಗಳಿಗೆ ದಾಖಲಾತಿ ಪರಿಶೀಲನೆ, ಪ್ರಮಾಣ ಪತ್ರಗಳ ಅಪ್ಲೋಡ್‌ಗೆ ಹಾಗೂ ತಿದ್ದುಪಡಿಗೆ ಕಾಲಾವಕಾಶವನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಯುವ ಕಾಂಗ್ರೆಸ್ ನ ಪ್ರಮುಖರಾದ ಸುಹಾಸ್ ಗೌಡ, ಆರ್. ಎಂ. ಓಂ, ನಾಗರಾಜ್ ನಾಯ್ಕ್, ಸಾಹಿಲ್, ಪ್ರಜ್ವಲ್, ಜಯಂತ್, ನವೀನ್ ಗುಜರ್, ರಾಘವೇಂದ್ರ  ಇದ್ದರು.

……………………………….

ಸಿ.ಇ.ಟಿಗೆ ನೋಂದಣಿ ಮಾಡಿಕೊಂಡು ದಾಖಲೆಗಳನ್ನು ಅಪ್ ಲೋಡ್ ಮಾಡಿದವರು ಮಾತ್ರ ಕರ್ನಾಟಕ ನೀಟ್ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು ಎಂಬುದು ವಿದ್ಯಾರ್ಥಿಗಳ ಗಮನಕ್ಕೆ ಬಂದಿಲ್ಲ. ಕೆ.ಇ.ಎ ಕಳೆದ ತಿಂಗಳು ದಾಖಲೆಗಳ ಆಪ್‌ಡೇಟ್‌ಗೆ ಅಂತಿಮ ಅವಕಾಶ ಎಂಬ ಅಧಿಸೂಚನೆ ಹೊರಡಿಸಿ ಮೇ ೯ರಿಂದ ೧೫ರವರೆಗೆ ತಿದ್ದುಪಡಿಗೆ ಅವಕಾಶವನ್ನೇನೋ ನೀಡಿತ್ತು. ಆದರೆ ವಿದ್ಯಾರ್ಥಿಗಳಿಗೆ ಆ ಮಾಹಿತಿ ಸಮರ್ಪಕವಾಗಿ ತಲುಪಿಲ್ಲ.

-ಹೆಚ್.ಪಿ. ಗಿರೀಶ್‌, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

RELATED ARTICLES
- Advertisment -
Google search engine

Most Popular

Recent Comments