Saturday, October 12, 2024
Google search engine
Homeಇ-ಪತ್ರಿಕೆನನ್ನ ವೃತ್ತಿಬದುಕಿನ ಬಿಗ್ ಬಜೆಟ್‌ ಚಿತ್ರ "ಕೃಷ್ಣಂ ಪ್ರಣಯ ಸಖಿ" ಆ.15ಕ್ಕೆ ಬಿಡುಗಡೆ: ಗೋಲ್ಡನ್ ಸ್ಟಾರ್...

ನನ್ನ ವೃತ್ತಿಬದುಕಿನ ಬಿಗ್ ಬಜೆಟ್‌ ಚಿತ್ರ “ಕೃಷ್ಣಂ ಪ್ರಣಯ ಸಖಿ” ಆ.15ಕ್ಕೆ ಬಿಡುಗಡೆ: ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ನನ್ನ ವೃತ್ತಿ ಬುದಕಿನಲ್ಲಿಯೇ ಬಿಗ್‌ ಬಜೆಟ್‌ ಚಿತ್ರ ಕೃಷ್ಣಂ ಪ್ರಣಯ ಸಖಿ ಇದೇ  ಆಗಸ್ಟ್‌ 15ರಂದು  ಬಿಡುಗಡೆಯಾಗಲಿದೆ ಎಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಹೇಳಿದ್ದಾರೆ.

ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ  ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿದ್ದರೆ, ಶ್ರೀನಿವಾಸರಾಜು ನಿರ್ದೇಶನ ನೀಡಿದ್ದಾರೆ.

ಇದು ಗಣೇಶ್ ಅವರಿಗೆ ಸೂಕ್ತವಾದ ಕಥೆ. ಅವರ ಹಾಗೂ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಆರು ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳು ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಇತ್ತೀಚಿಗೆ ಬಿಡುಗಡೆಯಾದ “ಚಿನ್ನಮ್ಮ” ಹಾಡಂತೂ ಈಗಾಗಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಆಗಸ್ಟ್ 15, ನಮ್ಮ ಚಿತ್ರ ತೆರೆ ಕಾಣಲಿದೆ. ನೋಡಿ ಹಾರೈಸಿ” ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ.

ಕೃಷ್ಣಂ ಪ್ರಣಯ ಸಖಿ” ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments