ನೀಟ್‌ ಪರೀಕ್ಷೆ: ಆದಿಚುಂಚನಗಿರಿ ಶಾಲೆಗೆ ಉತ್ತಮ ಫಲಿತಾಂಶ

ಶಿವಮೊಗ್ಗ : 2024-ನೀಟ್‌  ಪರೀಕ್ಷೆಯಲ್ಲಿ ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ.. ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ನೀಡಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆಂದು ಕಾಲೇಜು ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳಾದ  ಜೆ.ಎನ್.ಅದಿತ್ಯ 720 ಕ್ಕೆ 695 ಅಂಕಗಳು, ಪೂರ್ವಿಕ ಎಸ್.ಎಂ. 720 ಕ್ಕೆ 668 ಅಂಕಗಳು, ಸಾಕ್ಷಿತ್ ಕೆ.ಆರ್. 720 ಕ್ಕೆ 627 ಅಂಕಗಳು, ಅಭಿಷೇಕ ಎಸ್. 720 ಕ್ಕೆ 625 ಅಂಕಗಳು ರಕ್ಷಿತ ಜಿ.ಎಸ್. 720 ಕ್ಕೆ 623 ಅಂಕಗಳು ಸುದರ್ಶನ್ ಡಿ.ವೈ. 720ಕ್ಕೆ 612 ಅಂಕಗಳು, ನಿಕ್ಷಿತ್ ಸಿ. 720ಕ್ಕೆ 612 ಅಂಕಗಳು, ಶರತ್ ವಿ.ಕೆ. 720ಕ್ಕೆ 611 ಅಂಕಗಳು, ಶಿವಕುಮಾರ್ ಬಿ. 720ಕ್ಕೆ 610 ಅಂಕಗಳು, ಪ್ರಣತ ಎಂ.ಆರ್. 720ಕ್ಕೆ 602 ಅಂಕಗಳು, ಬಸವಂತ್ ಎಸ್. 720ಕ್ಕೆ 585 ಅಂಕಗಳು, ಉತ್ಸವ್ ಆರ್. 720ಕ್ಕೆ 561 ಅಂಕ ಪಡೆದಿದ್ದಾರೆ.

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಗಳು ಮತ್ತವರ ಪೋಷಕರಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಆಡಳಿತ ಮಂಡಳಿಯ ನಿರ್ದೇಶಕರು, ಕಾಲೇಜಿನ ಪ್ರಾಚಾರ್ಯರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.