Sunday, November 10, 2024
Google search engine
Homeಇ-ಪತ್ರಿಕೆಜಿಲ್ಲಾ‌ ಬ್ರಾಹ್ಮಣ ಮಹಾಸಭಾ‌ದಿಂದ ಅ.25 ಕ್ಕೆ ಆಚಾರ್ಯತ್ರಯ ಜಯಂತಿ

ಜಿಲ್ಲಾ‌ ಬ್ರಾಹ್ಮಣ ಮಹಾಸಭಾ‌ದಿಂದ ಅ.25 ಕ್ಕೆ ಆಚಾರ್ಯತ್ರಯ ಜಯಂತಿ

ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾ ದ ವತಿಯಿಂದ ಅ.25 ರಂದು ಶ್ರೀ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಆಚಾರ್ಯ ತ್ರಯರ ಜಯಂತಿ ಹಮ್ಮಿ ಕೊಳ್ಳಲಾಗಿದೆ ಎಂದು  ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ, ಶಂಕರಾಚಾರ್ಯರು, ಮಧ್ವಾಚಾರ್ಯರು ಹಾಗೂ ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಹಾಗೂ ಸಂದೇಶಗಳನ್ನು ಜನ ಮಾನಸಕ್ಕೆ ತಲುಪಿಸುವ ಸದುದ್ದೇಶದಿಂದ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಳೆದ 5 ವರ್ಷಗಳಿಂದ ಆಚಾರ್ಯ ತ್ರಯರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಈ ವರ್ಷದ ಆಚಾರ್ಯ ತ್ರಯರ ಜಯಂತಿಯನ್ನು ಅ 25 ರ ಶುಕ್ರವಾರದಂದು ಶ್ರೀ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಿದೆ ಎಂದರು.


 ಅಂದು ಸಂಜೆ ೬ ಗಂಟೆಗೆ ನಡೆಯುವ ಕಾರ್ಯಕ್ರಮ ದಲ್ಲಿ ಉಡುಪಿಯ ಆಸೆಮ್ಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾದ ಪ್ರೊ. ಪವನ್ ಕಿರಣ್‌ ರೆ ಅವರು  ವಿಶೇಷ ಉಪನ್ಯಾಸ  ನೀಡಲಿದ್ದಾರೆ. ಅವರು  ಯಕ್ಷಗಾನ ಪ್ರಸಂಗಗಳ ರಚನಾಕಾರರು ಹಾಗೂ ತಾಳ ಮದ್ದಲೆಯಲ್ಲಿ ಅರ್ಥಧಾರಿಗಳಾಗಿದ್ದಾರೆ. ಹಾಗೆಯೇ ಆಚಾರ್ಯತ್ರರ ಬಗ್ಗೆ  ಆಳವಾದ ಆಧ್ಯಯನನಡೆಸಿದ್ದಾರೆಂದು ತಿಳಿಸಿದರು.

ಅದೇ ದಿವಸ ಈ ಉಪನ್ಯಾಸ ಕಾರ್ಯಕ್ರಮದ ನಂತರ ನವರಾತ್ರಿ ಪ್ರಯುಕ್ತ ಏರ್ಪಡಿಸಲಾಗಿದ್ದ ವಿಪ್ರ ಮಹಿಳೆಯರಿಗಾಗಿ “ದೇವಿ ಕುರಿತ ಗೀತಗಾಯನ ಸ್ಪರ್ಧೆ’ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ೭೨ ಜನರು ಭಾಗವಹಿಸಿದ್ದರು.  ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ ‌. ಒಟ್ಟು ಹತ್ತು ಬಹುಮಾನ ನೀಡಲಾಗುತ್ತದೆ ಎಂದರು‌.

ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಅವರು  ಕೋರಿದರು. ಪತ್ರಿಕಾಗೋಷ್ಠಿಯಲ್ಲಿ  ಜಿಲ್ಲಾ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಬಿ.ಕೆ. ವೆಂಕಟೇಶಮೂರ್ತಿ, ಪದಾಧಿಕಾರಿಗಳಾದ ಕೇಶವಮೂರ್ತಿ, ಡಾ ನಾಗಮಣಿ, ಸರಳಹೆಗ್ಗಡೆ. ಎಂ ಎಸ್ ಸೂರ್ಯನಾರಾಯಣ್ ಇದ್ದರು.

RELATED ARTICLES
- Advertisment -
Google search engine

Most Popular

Recent Comments