ಶಿವಮೊಗ್ಗ : ಸಾಗರ ತಾಲೂಕು ಕಾರ್ಗಲ್ ಪಟ್ಟಣದಲ್ಲಿ ಕಾರ್ಗಲ್ ಪೊಲೀಸ್ ಠಾಣೆ ವತಿಯಿಂದ ಕಾರ್ಗಲ್ ಟೌನ್ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಗಲ್ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ ಹೊಳೆಬಸಪ್ಪ ಅವರು, ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಜೋಗ ಮತ್ತು ಕಾರ್ಗಲ್ ವ್ಯಾಪ್ತಿಯಲ್ಲಿ ಹೆಚ್ಚಿನದಾಗಿ ಶಾಲಾ ಮಕ್ಕಳು ಆಟೋಗಳಲ್ಲಿ ಪ್ರಯಾಣ ಮಾಡುವುದರಿಂದ ಆಟೋದಲ್ಲಿ ಮಿತಿಗಿಂತ ಹೆಚ್ಚಿನ ಮಕ್ಕಳಗಳನ್ನು ಕೂರಿಸಿಕೊಂಡು ಹೋಗಬಾರದು ಮತ್ತು ಈ ಭಾಗದಲ್ಲಿ ರಸ್ತೆಗಳು ಹೆಚ್ಚಿನ ತಿರುವಿನಿಂದ ಕೂಡಿದ್ದು ಸುರಕ್ಷತಾ ದೃಷ್ಟಿಯಿಂದ ಆಟೋಗಳನ್ನು ನಿಧಾನವಾಗಿ ಮತ್ತು ಸುರಕ್ಷಿತವಾಗಿ ಓಡಿಸಬೇಕೆಂದರು.
ದ್ವಿಚಕ್ರವಾಹನಗಳನ್ನು ಚಲಾವಣೆ ಮಾಡುವ ಪ್ರತಿಯೊಬ್ಬ *ಚಾಲಕರು ಮತ್ತು ಹಿಂಬದಿ ಸವಾರರಿಬ್ಬರೂ ತಮ್ಮ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್* ಗಳನ್ನು ಧರಿಸಿ ವಾಹನ ಚಲಾಯಿಸಬೇಕು, ಅಪ್ರಾಪ್ತ ವಯಸ್ಸಿನವರಿಗೆ *ವಾಹನ ಚಲಾವಣೆ ಮಾಡಲು ನೀಡುವುದು ಐಎಂವಿ ಕಾಯ್ದೆ ರೀತ್ಯಾ ದಂಡನೀಯ* ಅಪರಾಧವಾಗಿರುತ್ತದೆ. ಆದ್ದರಿಂದ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ಚಲಾವಣೆ ಮಾಡಲು ಅವಕಾಶ ಮಾಡಿಕೊಡಬೇಡಿ ಎಂದರು.
ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ 112 ಸಹಾಯವಾಣಿಗೆ ಕರೆ ಮಾಡಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ *ಜೋಕಾಲಿ ಆಟೋ ಸಂಘದ ಅಧ್ಯಕ್ಷರು, ಉಪಾಧ್ಯಕ್ಷಕರು ಮತ್ತು ಆಟೋ ಚಾಲಕರು* ಉಪಸ್ಥಿತರಿದ್ದರು.