ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಕುಮಾರಿ ಆಗ್ರಹ
ಶಿವಮೊಗ್ಗ,: ಮಹಿಳೆಯರ ಬಗ್ಗೆ ನಿಷ್ಕೃಷ್ಟವಾಗಿ, ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಸಾಗರ ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಕ್ಷಮೆ ಕೇಳಬೇಕು. ಅಲ್ಲದೇ ಅವರನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಕುಮಾರಿ ಆಗ್ರಹಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ನಗರಸಭೆ ಅಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿದಂತೆ ಸದಸ್ಯರಾಗಿರುವ ಲಲಿತಮ್ಮ ಎಂಬುವವರು ಹೈಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದರು. ಇದಕ್ಕೆ ಟಿ.ಡಿ.ಮೇಘರಾಜ್ ಅವರು ಅಸಮಧಾನಗೊಂಡು ಅ.9ರಂದು ನಡೆದ ಸಾಮಾನ್ಯ ಸಭೆಯಲ್ಲಿ ಲಲಿತಮ್ಮ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇವರು ಒಬ್ಬ ಆರೋಪಿಯಾಗಿದ್ದಾರೆ. ಇವರನ್ನು ಸಭೆಯಿಂದಹೊರಗೆ ಕಳಿಸಿ ಎಂದು ಅಗೌರವದಿಂದ ಮಾತನಾಡಿದ್ದಾರೆ. ಇದು ಎಷ್ಟರ ಮಟ್ಟಿಗೆಸರಿ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯ ಜಿಲ್ಲಾಧ್ಯಕ್ಷರಾಗಿರುವ ಇವರು ಮಹಿಳೆಯರ ಬಗ್ಗೆ ಮಾತನಾಡುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಬಿಜೆಪಿ ಮಹಿಳೆಯರಿಗೆ ಗೌರವ ಕೊಡುವ ಸಂಸ್ಕೃತಿ ಎಂದು ಮಾತನಾಡುತ್ತಾರೆ. ಆದರೆ ಇಲ್ಲಿ ಮೇಘರಾಜ್ ಅಧಿಕಾರದ ಹಪಾಹಪಿತನದಿಂದ ಕೋರ್ಟ್ಗೆ ಹೋಗಿದ್ದೇ ತಪ್ಪು ಎಂದು ಭಾವಿಸಿ ಆರೋಪಿಯೆಂದು ಹೇಳಿದ್ದಲ್ಲದೆ ಎಲ್ಲರ ಸಮ್ಮುಖದಲ್ಲಿ ಅವರನ್ನು ಹೊರಗೆ ಕಳಿಸಿ ಎಂದು ಹೇಳಿದ್ದಾರೆ. ಇದು ಇವರ ಸಂಸ್ಕೃತಿಯೇ ಎಂದು ಪ್ರಶ್ನೆ ಮಾಡಿದರು.
ಅಷ್ಟಕ್ಕೂ ತಡೆಯಾಜ್ಞೆ ಕೊಟ್ಟಿರುವುದು ನ್ಯಾಯಾಲಯ ಹಾಗಾಗಿ ಇವರುನ್ಯಾಯಾಲಯವನ್ನೇ ಅಗೌರವಿಸಿದಂತೆ ಆಗುತ್ತದೆ. ಲಲಿತಮ್ಮ ಏನು ಅಪರಾಧ ಮಾಡಿದ್ದರು ಎಂದು ಇವರು ಹೇಳಬೇಕಲ್ಲ, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಇವರು ಮಹಿಳೆಯರ ಬಗ್ಗೆ ಹೀಗೆ ನಿಂಧನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಇವರು ಅಪರಾಧಿ ಎನ್ನಲು ಇವರು ನ್ಯಾಯಾಧೀಶರೇ ಎಂದು ಪ್ರಶ್ನೆ ಮಾಡಿದರು.
ಸದಸ್ಯೆ ಲಲಿತಮ್ಮ ಮಾತನಾಡಿ, ನಾನು ಏನು ತಪ್ಪು ಮಾಡಿದ್ದೇನೆ ಎಂದು ನನ್ನ ಮೇಲೆ ಈ ರೀತಿ ಹರಿಹಾಯ್ದಿದ್ದಾರೆ, ಅವಮಾನ ಮಾಡಿದ್ದಾರೆ. ನಾನು ಮೂರು ಬಾರಿ ಆಯ್ಕೆ ಮಾಡಿದ್ದೇನೆ. ಅಧ್ಯಕ್ಷೆಯಾಗಿಯೂ ಕೆಲಸ ನಿರ್ವಹಿಸಿದ್ದೇನೆ.ನ್ಯಾಯ ಕೇಳುವುದು ತಪ್ಪೇ, ಟಿ.ಡಿ.ಮೇಘರಾಜ್ ಜೊತೆಗೆ ಸದಸ್ಯರಾದ ಗಣೇಶ್ ಪ್ರಸಾದ್, ಮಧುರಾಶಿವಾನಂದ್ ಮುಂತಾದ ಬಿಜೆಪಿ ಸದಸ್ಯರು ಕೂಡ ಅಪಮಾನ ಮಾಡಿದ್ದಾರೆ. ಇದರ ವಿರುದ್ಧ ನಾನು ಈಗಾಗಲೇ ಪೊಲೀಸರಿಗೆ ದೂರು ನೀಡಿರುವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಣ್ಣ, ಗೀತಾ ಬಾಯಿ, ಸುವರ್ಣ ನಾಗರಾಜ್, ಸಿರಿಜಾನ್, ಪ್ರಭಾವತಿ ಚಂದ್ರಕುಮಾರ್, ಪಡುವಳ್ಳಿ ಹರ್ಷೇಂದ್ರಕುಮಾರ್, ಉಷಾ,ಚಂದ್ರಪ್ಪ ಸೇರಿದಂತೆ ಹಲವರಿದ್ದರು.
ಟಿ.ಡಿ.ಮೇಘರಾಜ್, ಕೂಡಲೇ ಕ್ಷಮೇ ಕೇಳಬೇಕು.ಅಲ್ಲದೇ ಲಲಿತಮ್ಮನವರನ್ನು ನಿಂಧಿಸುವಾಗ ಸಾಗರ ಉಪವಿಭಾಗಾಧಿಕಾರಿ ಕೂಡ ಇದ್ದರು. ಅವರು ಕೂಡ ಸುಮ್ಮನೇ ಇದ್ದಾರೆ. ಇದು ಕೂಡ ತಪ್ಪು ಎಂದರು.
ಅವರು ಕ್ಷಮೆ ಕೇಳದಿದ್ದರೆ ಟಿ.ಡಿ.ಮೇಘರಾಜ್ ಅವರ ವಿರುದ್ಧ ಸಾಗರದಲ್ಲಿ ಮತ್ತು ಶಿವಮೊಗ್ಗದ ಬಿಜೆಪಿ ಕಛೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು.
– ಪ್ರಫುಲ್ಲಾಮಧುಕರ್, ವಿಧಾನಸಭಾ ಪರಿಷತ್ ಮಾಜಿ ಸದಸ್ಯೆ