ಶಿವಮೊಗ್ಗ : ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದಡಿ ೮ನೇ ದಿನ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್ ಗಳನ್ನು ನಗರದ ಖಾಸಗಿ ಬಸ್ ನಿಲ್ದಾಣ , ರೈಲ್ವೆ ನಿಲ್ದಾಣ, ಮೆಗನ್ ಆಸ್ಪತ್ರೆ ಹಾಗೂ ಹಲವು ಖಾಸಗಿ ಆಸ್ಪತ್ರೆಗಳ ಮುಂಭಾಗ ಆಹಾರದ ಅವಶ್ಯಕತೆ ಇರುವ ರೋಗಿಗಳ ಸಂಬಂಧಿಗಳಿಗೆ ಆಹಾರ ವನ್ನು ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ಎಚ್.ಪಿ.ಗಿರೀಶ್, ಯುವ ಕಾಂಗ್ರೆಸ್ ನ ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ , ಈ.ಟಿ ನಿತಿನ್ ದಕ್ಷಿಣ ಬ್ಲಾಕ್ ಎಸ್ ಕುಮಾರೇಶ್ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ,, ವೆಂಕಟೇಶ್ ಕಲ್ಲೂರ್ , ಸುಹಾಸ್ , ನಿತೀಶ್, ಕ್ಲೇಮೆಂಟ್ ಇತರರು ಇದ್ದರು.