ಶಿವಮೊಗ್ಗ: ಸಹಕಾರಿ ಸೊಸೈಟಿ ಗಳು ಸ್ವಂತ ಬಂಡವಾಳದಿಂದ ಸಾಲ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳುವ ಮೂಲಕ ನಬಾರ್ಡ್ ಅವಲಂಬನೆ ಕಡಿಮೆ ಮಾಡಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಕರೆ ನೀಡಿದರು.
ಇಂದು ಡಿಸಿಸಿ ಬ್ಯಾಂಕ್ ಸಭಾಂಗಣ ದಲ್ಲಿ ಬ್ಯಾಂಕಿನ ವ್ಯಾಪ್ತಿಯ ಎಲ್ಲಾ ಸೊಸೈಟಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೊಸೈಟಿಗಳು ಠೇವಣಿ ಪಡೆಯುವ ಮೂಲಕ ಸ್ವಂತ ಬಂಡವಾಳ ಹೆಚ್ಚಿ ಸಿಕೊಳ್ಳುವುದನ್ನು ಆಂದೋಲನದ ರೂಪದಲ್ಲಿ ಮಾಡಬೇಕೆಂದರು.
ನಬಾರ್ಡ್‌ನಿಂದ ಡಿಸಿಸಿ ಬ್ಯಾಂಕ್ ಗಳಿಗೆ ಸಾಲ ನೀಡುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯ ವಾಗಿ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ನಬಾರ್ಡ್ ಪುನರ್‌ಧನ ವನ್ನು ನಿಲ್ಲಿಸಿದರೂ ಅಚ್ಚರಿ ಪಡ ಬೇಕಾಗಿಲ್ಲ. ನಬಾರ್ಡ್‌ನ ಈ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದ್ದು, ಸಹಕಾರಿ ಸಂಘಗಳು ಸ್ವಂತ ಬಂಡವಾಳ ಕ್ರೋಢಿಕರಣಕ್ಕೆ ಕ್ರಮ ಕೈಗೊಳ್ಳ ಕೆಂದು ಎಚ್ಚರಿಸಿದರು.
ಡಿಸಿಸಿ ಬ್ಯಾಂಕ್ ೪೫೦ ಕೋಟಿ ರೂ. ಸಾಲ ನೀಡಲು ಉದ್ದೇಶಿಸಿದ್ದು, ಈಗಾಗಲೇ ೨೮೦ಕೋಟಿ ರೂ. ಸಾಲ ನೀಡಿದೆ. ಇನ್ನೂ ೨೫ ಸಾವಿರ ರೈತರಿಗೆ ನೂರಾರು ಕೋಟಿರೂ. ಸಾಲ ನೀಡಬೇಕಿದೆ. ಆದರೆ ನಬಾರ್ಡ್ ೨೦೦ ಕೋಟಿ ರೂ. ನೀಡುವ ಕಡೆ ೧೧೫ ಕೋಟಿರೂ. ನೀಡುವುದಾಗಿ ಹೇಳಿತ್ತು, ಆದರೆ ಬಿಡುಗಡೆ ಮಾಡಿದ್ದು ಕೇವಲ ೩೨ಕೋಟಿರೂ. ಈ ಹಣದಲ್ಲಿ ಎಷ್ಟು ಜನರಿಗೆ ಸಾಲ ನೀಡಲು ಸಾಧ್ಯ. ಆದ್ದರಿಂದ ಸೊಸೈಟಿಗಳು ಸಂಪೂರ್ಣ ಡಿಸಿಸಿ ಬ್ಯಾಂಕ್‌ನ ಹಣವನ್ನು ನೆಚ್ಚಿಕೊಳ್ಳದೆ ಸ್ವಂತ ಬಂಡವಾಳ ಹೊಂದುವುದು ಅನಿವಾರ್ಯ ಎಂದರು.
ನಬಾರ್ಡ್‌ನ ೩೨ ಕೋಟಿ ಬಿಟ್ಟು ಉಳಿದ ಸಂಪೂರ್ಣ ಸಾಲವನ್ನು ಡಿಸಿಸಿ ಬ್ಯಾಂಕ್ ಸ್ವಂತ ಬಂಡವಾಳ ದಿಂದ ನೀಡಿದೆ. ಪ್ರಸ್ತುತ ಶೇ.೯೦ರಷ್ಟು ಸೊಸೈಟಿಗಳು ಡಿಸಿಸಿ ಬ್ಯಾಂಕನ್ನು ಅವಲಂಬಿಸಿದ್ದು ಮುಂದೆ ಈ ಅವಲಂಬನೆ ಕಡಿಮೆ ಮಾಡ ಬೇಕೆಂದರು.
ಹೊಸಬರಿಗೆ ಸಾಲ: ಡಿಸಿಸಿ ಬ್ಯಾಂಕ್‌ನಿಂದ ಮುಂದಿನ ಅಕ್ಟೋಬರ್ ನೊಳಗೆ ೨೫ ಸಾವಿರ ರೈತರಿಗೆ ಸಾಲ ನೀಡಲು ಉದ್ದೇಶಿಸಿದ್ದು, ಈ ಸಾಲವನ್ನು ಹೊಸ ಸದಸ್ಯರಿಗೆ, ರೈತರಿಗೆ ಮಾತ್ರ ನೀಡಬೇಕು. ಯಾರಿಗೂ ಹೆಚ್ಚುವರಿ ಸಾಲ ನೀಡುವಂತಿಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.
ವೇದಿಕೆಯಲ್ಲಿ ಡಿಸಿಸಿಬ್ಯಾಂಕ್ ನಿರ್ದೇಶಕರಾದ ದುಗ್ಗಪ್ಪಗೌಡ, ಯೋಗೇಶ್, ಸಹಕಾರಿ ನಿಬಂಧಕ ರಾದ ವಾಸುದೇವ, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.