ಕೋವಿಡ್ ತಡೆಯುವಲ್ಲಿ ಸರ್ಕಾರ ಕೈಚೆಲ್ಲಿದೆ : ಹೆಚ್.ಎಸ್. ಸುಂದರೇಶ್

ಶಿವಮೊಗ್ಗ,ಮೇ.೫: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನ ಕುಮಾರ್ ಮತ್ತು ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್ ರವರು ಇಂದಿನಿಂದ ಕೋವಿಡ್ ರೋಗಿಗಳಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ರವರು ಚಾಲನೆ ನೀಡಿದರು. ಆಂಬುಲೆನ್ಸ್ ಸೇವೆ ಅಗತ್ಯ ಇರುವವರು ಸಹಾಯವಾಣಿ:೮೮೬೧೫೨೯೯೫೪, ೯೯೦೦೨೭೯೦೮೬ ಸಂಪರ್ಕಿಸಬಹುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ರಮೇಶ್ ಹೆಗ್ಡೆ, ಸೌಗಂಧಿಕ, ದೀಪಕ್ ಸಿಂಗ್, ಯಮುನಾ ರಂಗೇಗೌಡ, ಶಾಮೀರ್ ಖಾನ್, ಮೆಹಖ್ ಷರೀಫ್, ಆರೀಫ್, ಸ್ಟೆಲ್ವ ಮಾರ್ಟಿನ್ ಇನ್ನಿತರರಿದ್ದರು.

ಶಿವಮೊಗ್ಗ : ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಹೆಣಗಳ ಜಾತ್ರೆ ನಡೆಯುತ್ತಿದ್ದರೂ, ಸರ್ಕಾರ ಮಾತ್ರ ಕೈಚೆಲ್ಲಿ ಕುಳಿತಿರುವುದು ಅತ್ಯಂತ ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಜೂಮ್ ಆಪ್ ಮೂಲಕ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಎರಡನೇ ಅಲೆಯ ಭೀಕರತೆಗೆ ಜಿಲ್ಲೆಯ ಜನ ಸಂಪೂರ್ಣವಾಗಿ ಭಯ ಬಿದ್ದಿದ್ದಾರೆ. ಪ್ರತಿದಿನ ಸಾವು, ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಮುಖವಾಗಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಕೊರತೆ ಉಂಟಾಗಿದೆ. ದಿನದಿಂದ ದಿನಕ್ಕೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ನಿನ್ನೆ ಒಂದೇ ದಿನ ೧೫ ಜನರು ಸಾವು ಕಂಡಿದ್ದಾರೆ. ಅದರಲ್ಲಿ ನಾಲ್ಕೈದು ಜನರು ಆಮ್ಲಜನಕ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಜಿಲ್ಲಾ ಮಂತ್ರಿಗಳು ಮಾತ್ರ ಆಮ್ಲಜನಕದ ಕೊರತೆ ಇಲ್ಲವೆಂದು ಹೇಳುತ್ತಿರುವುದು ಸರಿಯಲ್ಲ ಎಂದರು.

ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆಯಿದೆ ಎಂದು ಜಿಲ್ಲಾ ಕಾಂಗ್ರೆಸ್ ಪದೇ ಪದೇ ಜಿಲ್ಲಾ ಮಂತ್ರಿಗಳಿಗೆ, ಸಂಸದರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತಲೇ ಬಂದಿದ್ದರೂ ಸಹ ಇದುವರೆಗೂ ಮೆಗ್ಗಾನ್ ಆಸ್ಪತ್ರೆಗೆ ಒಂದೂ ವೆಂಟಿಲೇಟರ್ ಹೆಚ್ಚಿಸಿಲ್ಲ. ಜೊತೆಗೆ ಕೆಲವು ವೆಂಟಿಲೇಟರ್ ಕೆಟ್ಟುಹೋಗಿವೆ. ಅವನ್ನು ದುರಸ್ತಿ ಮಾಡುತ್ತಿಲ್ಲ. ಆಮ್ಲಜನಕದ ಕೊರತೆ ಇಲ್ಲವೆಂದು ಹೇಳುತ್ತಿದ್ದರೂ, ಕೂಡ ಆಮ್ಲಜನಕದ ಕೊರತೆ ಇರುವುದು ನಿಜವಾಗಿದೆ. ಈ ವಿ?ಯದಲ್ಲಿ ಅಧಿಕಾರಿಗಳು ಮತ್ತು ಸರ್ಕಾರ ಜನತೆಗೆ ಸುಳ್ಳು ಅಂಕಿ, ಅಂಶ ನೀಡಬಾರದು ಎಂದು ಹೇಳಿದರು.

ಜಿಲ್ಲೆಯಲ್ಲಿ ರಾಜಕಾರಣಿಗಳದ್ದೇ ಖಾಸಗಿ ಆಸ್ಪತ್ರೆಗಳಿವೆ. ಕಾಲೇಜ್‌ಗಳು ಇವೆ. ಅಲ್ಲಿ ಕೋವಿಡ್ ಸೋಂಕಿತರಿಗೆ ಕನಿ? ೧ ತಿಂಗಳ ಕಾಲವಾದರೂ ಉಚಿತ ಚಿಕಿತ್ಸೆ ನೀಡಬೇಕು. ಕಾಲೇಜ್‌ಗಳಿಗೆ ಹೇಗಿದ್ದರೂ ರಜೆ ಇದ್ದು, ಅವುಗಳನ್ನು ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಮರಣ ಮೃದಂಗವಾಗುತ್ತಿದ್ದರೂ ಕೂಡ ಸಂಪುಟದ ಸಚಿವರು ಮಾತ್ರ ತಮಗೇನೂ ಆಗಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಕೆಲವರು ವ್ಯಕ್ತಿಯ ಹೆಸರು ಹೇಳದೇ ಸಂಘಟನೆ ಹೆಸರು ಹೇಳುತ್ತಾ ಧರ್ಮವನ್ನು ಮಧ್ಯ ತರುತ್ತಿದ್ದಾರೆ. ಕೊರೋನಾದಂತಹ ಇಂತಹ ಸಂದರ್ಭದಲ್ಲಿ ಇದು ಬೇಕೆ? ಅದನ್ನು ಬಿಟ್ಟು ಜಿಲ್ಲೆಯಲ್ಲಿ ಮುಂದೆ ಬರಬಹುದಾದ ಭಯಂಕರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೈಗಾರಿಕೆಗಳಿಗೆ ಪೂರೈಕೆ ಮಾಡುತ್ತಿರುವ ಆಮ್ಲಜನಕ ನಿಲ್ಲಿಸಬೇಕು. ಭದ್ರಾವತಿಯಲ್ಲಿ ದುಬಾರಿ ವೆಚ್ಛವಾಗುತ್ತದೆ ಎಂಬ ಕಾರಣಕ್ಕೆ ಆಮ್ಲಜನಕ ಉತ್ಪಾದನಾ ಘಟಕ ಪುನಾರಾರಂಭಿಸಲು ಮೀನಾಮೇ? ಎಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹಣದ ಮುಖ ನೋಡಬಾರದು. ಅದೆ? ದುಬಾರಿಯಾದರೂ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸಬೇಕೆಂದು ಒತ್ತಾಯಿಸಿದರು.

ಸರ್ಕಾರ ಈಗ ಜಾರಿಗೊಳಿಸಿರುವ ಕರ್ಫ್ಯೂ ಅರ್ಥವಿಲ್ಲದಂತಾಗಿದೆ. ಬೆಳಗ್ಗೆ ೬ ರಿಂದ ೧೦ ಗಂಟೆಯವರೆಗೆ ಜನ ಜಾತ್ರೆಯೇ ಇರುತ್ತದೆ. ಆಗ ಕೊರೋನಾ ಹರಡುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಸರ್ಕಾರ ಕೂಡಲೇ ಕೊರೋನಾ ಸಂಕ?ಕ್ಕೆ ಈಡಾದ ಎಲ್ಲಾ ಬಡವರ್ಗದ ಜನರಿಗೆ ೧೦ ಸಾವಿರ ರೂ. ನೆರವು ನೀಡಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ ಹೆಚ್ಚಿಗೆ ಏನೂ ಮಾಡಲು ಸಾಧ್ಯವಿಲ್ಲ. ನಾವು ಪದೇ ಪದೇ ಒಂದು ವ?ದಿಂದ ಸರ್ಕಾರದ ಕ್ರಮಗಳನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಆದರೂ, ಕೇಳುತ್ತಿಲ್ಲ. ಒಂದು ಜಿಲ್ಲಾ ಕೇಂದ್ರದಲ್ಲಿ ಹೆಲ್ಪ್ ಲೈನ್ ಸ್ಥಾಪಿಸಿ ಆ ಮೂಲಕ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸಂತ್ರಸ್ಥರಿಗೆ ಔಷಧ ನೀಡುವುದು, ಕಷ್ಟದಲ್ಲಿರುವವರಿಗೆ ಊಟ ನೀಡುವುದು, ಮಾಸ್ಕ್, ಸ್ಯಾನಿಟೈಸರ್ ಅನ್ನು ಸಂತ್ರಸ್ಥರ ಮನೆ ಬಾಗಿಲಿಗೆ ತಲುಪಿಸುವುದು ಸೇರಿದಂತೆ ಅನೇಕ ಸಹಾಯ ಮಾಡುತ್ತಿದೆ ಎಂದರು.

ಕೊರೋನಾ ನಿಯಂತ್ರಿಸದ ಕೇಂದ್ರ ಸರ್ಕಾರ ಅಧಿಕಾರ ಬಿಟ್ಟು ಕೆಳಗಿಳಿಯಬೇಕು. ಕೊರೋನಾ ಮುಗಿಯುವವರೆಗೂ ರಾ?ಪತಿ ಆಡಳಿತ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿ.ಎಸ್.ಚಂದ್ರಭೂಪಾಲ್, ರಾಜ್ಯ ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಸೌಗಂಧಿಕಾ ರಘುನಾಥ್ , ಜಿಲ್ಲಾ ವಕ್ತಾರ ಎಂ.ಚಂದನ್ ಉಪಸ್ಥಿತರಿದ್ದರು.